ಕಾರವಾರ: ಕುಡಿದ ಅಮಲಿನಲ್ಲಿ ಮಗನ ಮೇಲೆ ತಂದೆಯೇ ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರೇಬೈಲ್ ನಲ್ಲಿ ನಡೆದಿದೆ.
ರಾವಯ್ಯ ಗುಂಡು ಹಾರಿಸಿದ ತಂದೆ. ರಾವಯ್ಯ ಕುಡಿದ ಅಮಲಿನಲ್ಲಿ ತನ್ನ ಮಗ ನಾಗೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ. ನಾಗೇಂದ್ರ ಗುಂಡು ತಗುಲಿ ತೀವ್ರ ಅಸ್ವಸ್ಥಗೊಂಡಿದ್ದಾನೆ.
Advertisement
ರಾವಯ್ಯ ಹಾಗೂ ನಾಗೇಂದ್ರ ನಡುವೆ ಆಸ್ತಿ ಸಂಬಂಧ ಮನಸ್ತಾಪ ಇತ್ತು. ಬುಧವಾರ ಈ ವಿಚಾರದ ಬಗ್ಗೆ ಮಾತುಕತೆ ನಡೆದಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು ಕುಡಿದ ಅಮಲಿನಲ್ಲಿ ಇದ್ದ ತಂದೆ ರಾವಯ್ಯ ಬಂದೂಕಿನಿಂದ ಗುಂಡು ಹಾರಿಸಿದ್ದು, ಪರಿಣಾಮ ಮಗನ ಹೊಟ್ಟೆ ಸೀಳಿದೆ.
Advertisement
ನಾಗೇಂದ್ರನ ಹೊಟ್ಟೆಗೆ ಗುಂಡು ಬೀಳುತ್ತಿದ್ದಂತೆ ರಾವಯ್ಯ ಗಾಬರಿಗೊಂಡು ಮಗನನ್ನು ಶಿರಸಿ ಟಿಎಸ್‍ಎಸ್ ಆಸ್ಪತ್ರೆಗೆ ಕೊರೆದುಕೊಂಡು ಹೋಗಿದ್ದಾನೆ. ಸದ್ಯ ನಾಗೇಂದ್ರಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುದಿದ್ದಾನೆ.
Advertisement
ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ವಶಕ್ಕೆ ಪಡೆಯಲಾಗಿದೆ.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]