- ನೀರು ಬಿಡಲು ಚಿಂತನೆ ಮಾಡಿ, ಆಗ ಸಭೆಗೊಂದು ಅರ್ಥ – ರೈತರ ಆಕ್ರೋಶ
- ಆ.15ರ ಒಳಗೆ ಭದ್ರ ನಾಲೆಗೆ ನೀರು ಹರಿಸುವಂತೆ ಡೆಡ್‌ಲೈನ್
ದಾವಣಗೆರೆ: ಭದ್ರ ಅಣೆಕಟ್ಟಿನಲ್ಲಿ (Bhadra Dam) 172 ಅಡಿಯಷ್ಟು ನೀರು ಶೇಖರಣೆಯಾಗಿದೆ. ಆದರೂ ಕೂಡ ಮುಂಗಾರು ಬೆಳೆಗೆ ಭದ್ರ ನೀರು ಹಾಯಿಸುತ್ತಿಲ್ಲ. ಪ್ರತಿ ವರ್ಷ ಹೋರಾಟ ಮಾಡಿಯೇ ನೀರು ಬಿಡಿಸಿಕೊಳ್ಳಬೇಕಾಗಿದೆ ಎಂದು ದಾವಣಗೆರೆ (Davanagere) ಹಾಗೂ ಹರಿಹರ ಭಾಗದ ರೈತರು (Farmers) ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ಜಿಎಂ ಗಂಗಾಧರಸ್ವಾಮಿ ರೈತರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ದಾವಣಗೆರೆ, ಹರಿಹರ ಸೇರಿದಂತೆ ಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಭಾಗಿಯಾಗಿದ್ದರು. ಈ ವೇಳೆ, ಪ್ರತಿ ಬಾರಿ ಕೂಡ ಹೋರಾಟ ನಡೆಸಿಯೇ ಬೆಳೆಗಳಿಗೆ ನೀರು ತರಬೇಕಾದ ಪರಿಸ್ಥಿತಿ ಇದೆ. ಸುಮ್ಮನೆ ಸಭೆ ಮಾಡಿ ಹೋಗುವುದಲ್ಲ ರೈತರಿಗೆ ನೀರು ತರುವುದರ ಬಗ್ಗೆ ಚಿಂತನೆ ಮಾಡಬೇಕು. ಆಗ ಸಭೆಗೆ ಒಂದು ಮಹತ್ವ ಬರುತ್ತದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ ಗೊಂದಲದ ಗೂಡು – ಕನ್ನಡ ಸಂಘಟನೆಗಳ ಮಧ್ಯೆ ಮೂಡಿದ ಭಿನ್ನಮತ, ವಾಟಾಳ್ ಬಿಗಿಪಟ್ಟು

ಉಸ್ತುವಾರಿ ಸಚಿವರು ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು. ಆ.15ರ ಒಳಗೆ ಭದ್ರ ನಾಲೆಗೆ ನೀರು ಹರಿಸಬೇಕು ಎಂದು ಡೆಡ್‌ಲೈನ್ ನೀಡಿದ್ದಾರೆ.
ಇದೇ ವೇಳೆ ನೀರಾವರಿ ತಜ್ಞ ಪ್ರೋ.ಸಿ ನರಸಿಂಹಪ್ಪ, ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಸೇರಿದಂತೆ ಹಲವು ರೈತ ಮುಖಂಡರು ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಮಂಗಳೂರು To ಶೃಂಗೇರಿ ಹೈವೇಯಲ್ಲಿ ನಿರಂತರ ಗುಡ್ಡ ಕುಸಿತ – ವಾಹನ ಸವಾರರ ಆತಂಕ

