– ಮತ್ತೊಂದು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ ಯಶಸ್ವಿ
ಹಾಸನ: ನಮ್ಮ ತೋಟಕ್ಕೆ ಆಹಾರ ಅರಸಿ ಬಂದ ಕಾಡಾನೆಗೆ (Elephant) ತೊಂದರೆ ಕೊಡ್ಬೇಡಿ ಎಂದು ತೋಟದ ಮಾಲೀಕರೊಬ್ಬರು ಆನೆಗೆ ರೇಡಿಯೋ ಕಾಲರ್ ಅಳವಡಿಕೆಗೆ ಅಡ್ಡಿ ಪಡಿಸಿದ ಘಟನೆ ಬೇಲೂರಿನ (Beluru) ಹೆಗ್ಗಡಿಹಳ್ಲಿ ಗ್ರಾಮದಲ್ಲಿ ನಡೆದಿದೆ.
ರಾಯ್ ಎಂಬವರ ತೋಟದಲ್ಲಿದ್ದ ಬೀಟಮ್ಮ-1 ಕಾಡಾನೆ ಗುಂಪು ಇತ್ತು. ಈ ವೇಳೆ ಕಾರ್ಯಾಚರಣೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ತಯಾರಿ ನಡೆಸಿದ್ದರು. ಇದಕ್ಕೆ ಕಾಫಿ ಎಸ್ಟೇಟ್ ಮಾಲೀಕ ರಾಯ್ ಅಡ್ಡಿ ಪಡಿಸಿದ್ದಾರೆ. ನಮ್ಮ ತೋಟಕ್ಕೆ ಕಾಡಾನೆಗಳು ಅಹಾರ ಅರಸಿ ಬಂದಿವೆ. ಕಾಡಾನೆಗಳು ಆಹಾರ ತಿಂದು ಹೋಗಲಿ. ಕಾಡಾನೆಗಳಿಂದ ನಮಗೆ ನಷ್ಟವಾಗುತ್ತದೆ. ಆದರೆ ನಮ್ಮ ತೋಟದಲ್ಲಿ ಅವುಗಳಿಗೆ ತೊಂದರೆ ಕೊಡುವುದು ಬೇಡ ಎಂದು ಅರಣ್ಯ ಇಲಾಖೆ ಸಿಬ್ಬಂದಿಗೆ ರಾಯ್ ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಭುವನೇಶ್ವರಿ ಗುಂಪಿನ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ – ಮೊದಲ ದಿನದ ಕಾರ್ಯಾಚರಣೆ ಯಶಸ್ವಿ
ಮಧ್ಯಾಹ್ನದವರೆಗೂ ರಾಯ್ ಮನವೊಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಯತ್ನಿಸಿದರು. ಆದರೆ ಅವರು ಒಪ್ಪಲಿಲ್ಲ. ಮಧ್ಯಾಹ್ನನದ ಬಳಿಕ ರಾಯ್ ಎಸ್ಟೇಟ್ ದಾಟಿ, ಜಾವೀದ್ ಎಂಬುವವರ ಕಾಫಿ ಎಸ್ಟೇಟ್‌ಗೆ ದಾಟಿದ ಕಾಡಾನೆಗಳ ಹಿಂಡು ದಾಟಿತ್ತು. ಇದರಿಂದ ಇಂದು ತಡವಾಗಿ ಎರಡನೇ ದಿನದ ಕಾರ್ಯಾಚರಣೆ ಆರಂಭವಾಯಿತು.
ಜಾವಿದ್ ಅವರ ಕಾಫಿ ತೋಟದಲ್ಲಿ ಅರವಳಿಕೆ ಮದ್ದು ನೀಡಿ, ಬೀಟಮ್ಮ ಗ್ರೂಪ್-1 ಕಾಡಾನೆ ಗುಂಪಿನ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಯಿತು. 2023 ರ ನವೆಂಬರ್‌ನಲ್ಲಿ ಇದೇ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ರೇಡಿಯೋ ಕಾಲರ್‌ನ ಬ್ಯಾಟರಿ ಚಾರ್ಜ್ ಮುಗಿದಿದ್ದ ಹಿನ್ನೆಲೆಯಲ್ಲಿ ಇಂದು ಹೊಸ ಇಂಡಿಯನ್ ಮೇಡ್ ರೇಡಿಯೋ ಕಾಲರ್ ಅಳವಡಿಸಲಾಯಿತು. ನಾಳೆ (ಆ.12) ಒಂಟಿಸಲಗವನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮಿತಿ ಮೀರಿದ ʻಕೆ.ಪಿ ಕಾಲರ್ʼ ಪುಂಡಾಟ – ಸೆರೆಗೆ ಕುಮ್ಕಿ ಆನೆಗಳ ತಂಡ ಆಗಮನ

