– ಗ್ರೌಂಡ್ ಹೊರಗೂ ಸ್ಯಾಮ್ಸನ್ ರಿಯಲ್ ಹಿರೋ
ತಿರುವನಂತಪುರಂ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಗ್ರೌಂಡ್‌ನಲ್ಲಿ ಶತಕ ಸಿಡಿಸಿ ಚಪ್ಪಾಳೆ ಗಿಟ್ಟಿಸುವುದಷ್ಟೇ ಅಲ್ಲ, ಗ್ರೌಂಡ್ ಹೊರಗೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಂಜು ಸ್ಯಾಮ್ಸನ್ ಅವರ ಸರಳತೆ ಆಗಾಗ್ಗೆ ಗಮನ ಸೆಳೆಯುತ್ತಲೇ ಇರುತ್ತದೆ. ಈಗ ಕ್ರಿಕೆಟ್ ಹೊರತಾಗಿ ಬೇರೊಂದು ವಿಚಾರಕ್ಕೆ ಸಂಜು ಸುದ್ದಿಯಲ್ಲಿದ್ದಾರೆ.
Sanju Samson is the only guy who can fix a fan’s “Broken Display” problem and break Delhi Capitals’ “Playoff Hopes” in the same 24 hours.
Bro casually hit a 115 (56) & gifted a fan a POVA Curve 2. pic.twitter.com/0mJKXlznqx
— Mufaddal Vohra (@mufaddal_vohra) April 14, 2026
ಹೌದು. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ಪಂದ್ಯದ ಬಳಿಕ ಸ್ಯಾಮ್ಸನ್ ಕೋಝಿಕೋಡ್‌ನಿಂದ ಕೊಯಮತ್ತೂರಿಗೆ ತೆರಳುತ್ತಿದ್ದರು. ಈ ವೇಳೆ ಫೋನ್ ಕರೆಯೊಂದು ಬಂದಿತ್ತು. ಮಾತನಾಡುವುದಕ್ಕಾಗಿ ಪಾಲಕ್ಕಾಡ್‌ನಲ್ಲಿ ಸ್ವಲ್ಪ ಸಮಯ ಕಾರು ನಿಲ್ಲಿಸಿದ್ರು. ಅದೇ ಸಮಯದಲ್ಲಿ ತನ್ನ ಸ್ನೇಹಿತರೊಟ್ಟಿಗೆ ಕ್ರಿಕೆಟ್ ಆಡಲು ತೆರಳುತ್ತಿದ್ದ ಕಟಂಪಳಿಪುರಂನ ಕೇಬಲ್ ಆಪರೇಟರ್ ಶಬರೀಷ್ ಎಂಬಾತ ಕಾರಿನೊಳಗೆ ಸ್ಯಾಮ್ಸನ್ ಇರುವುದನ್ನ ಗಮನಿಸಿ, ಹತ್ತಿರ ಬಂದರು.

ಈ ವೇಳೆ ವಿಡಿಯೋ ಕಾಲ್‌ನಲ್ಲಿದ್ದ (Video Call) ಸಂಜು ಸ್ಯಾಮ್ಸನ್ ಒಂದೇ ನಿಮಿಷ ಅಂತ ಕೇಳಿಕೊಂಡರು. ಕರೆ ಮುಗಿಸಿ ಬಳಿಕ ಅಭಿಮಾನಿಯನ್ನ ಪ್ರೀತಿಯಿಂದಲೇ ಮಾತನಾಡಿಸಿದ್ರು. ಬಳಿಕ ಅಭಿಮಾನಿ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದ್ರು, ಈ ವೇಳೆ ಶಬರೀಷ್ ತಮ್ಮ ಒಡೆದ ಡಿಸ್‌ಪ್ಲೇ ಇದ್ದ ಫೋನ್‌ನಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಡಿಸ್‌ಪ್ಲೇ ಹಾನಿಯಾಗಿದ್ದ ಕಾರಣ, ಫೋಟೋ ಕೂಡ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಬಳಿಕ ಏನನ್ನೂ ಮಾತನಾಡದೇ ಕಾರಿನ ಬಳಿ ಬಂದ ಸಂಜು ಡಿಕ್ಕಿಯಲ್ಲಿ ಇಟ್ಟಿದ್ದ, ಸುಮಾರು 30 ರಿಂದ 40 ಸಾವಿರ ರೂಪಾಯಿ ಮೌಲ್ಯದ ಫೋನನ್ನ ಅಭಿಮಾನಿಗೆ ಉಡುಗೊರೆಯಾಗಿ ಕೊಟ್ಟೇಬಿಟ್ಟರು.

ಒಂದು ಐಪಿಎಲ್ ಸೀಸನ್‌ನಿಂದಲೇ ಕೋಟ್ಯಂತರ ರೂಪಾಯಿ ಸಂಪಾದಿಸುವ ಸಂಜು ಸ್ಯಾಮ್ಸನ್‌ಗೆ 30-40 ಸಾವಿರ ರೂಪಾಯಿ ದೊಡ್ಡ ಮೊತ್ತವೇನಲ್ಲ. ಆದ್ರೆ ಸ್ಟಾರ್ ಕ್ರಿಕೆಟಿಗನ ಸರಳತೆ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಸಂಜು ಅವರಿಂದ ಫೋನ್ ಪಡೆದ ಅಭಿಮಾನಿ ಸಂಭ್ರಮದಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಈ ಹೃದಯಸ್ಪರ್ಧಿ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

