ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಡ್ರಮ್ಮರ್ ದೇವ ನಿಧನರಾಗಿದ್ದಾರೆ. ಕನ್ನಡದ ಶಿವಮಣಿ ಎಂದೇ ದೇವ ಖ್ಯಾತಿ ಗಳಿಸಿದ್ದರು.
ಕಳೆದ ಜೂನ್‌ನಲ್ಲಿ ಸ್ಕ್ರೋಕ್ ಆಗಿತ್ತು. ಆರ್.ಆರ್ ನಗರದ ಸ್ಕಂದಶ್ರೀ ಅಪಾರ್ಟ್ಮೆಂಟ್‌ನ ನಿವಾಸದಲ್ಲಿ ದೇವ್ ನಿಧನರಾಗಿದ್ದಾರೆ. ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಡ್ರಮ್ಮರ್ ದೇವ ಅವರು ತಮ್ಮದೇ ಆದ ವಿಭಿನ್ನ ಸ್ಟೈಲ್‌ನಿಂದ ಹೆಸರುವಾಸಿಯಾಗಿದ್ದರು. ಸ್ಯಾಂಡಲ್‌ವುಡ್‌ನಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. RCB ಪಂದ್ಯಾವಳಿಯಲ್ಲಿ ಲೈವ್ ಬೀಟ್ ಪ್ರದರ್ಶನ ಮಾಡಿ ಕ್ರೇಜ್ ಹೆಚ್ಚಿಸಿದ್ದರು.
ಸ್ಟ್ರೋಕ್ ಸಮಸ್ಯೆಯಿಂದ ಬಳಲುತ್ತಿದ್ದರು. ಗ್ಯಾಂಗ್ರಿನ್‌ನಿಂದ ಬಲಗಾಲನ್ನು ತೆಗೆಯಲಾಗಿತ್ತು. ನಂತರ ಸ್ಟ್ರೋಕ್ ಪರಿಣಾಮ ಆರೋಗ್ಯ ತೀರ ಹದಗೆಟ್ಟಿತ್ತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. 5 ಈಡಿಯಟ್ಸ್ ಹಾಗೂ ಪ್ರೀತಿ ನೀ ಹಿಂಗ್ಯಾಕೆ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

