Connect with us

Dharwad

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ಧೆ

Published

on

ಹುಬ್ಬಳ್ಳಿ: ಅಂಗಾಂಗ ದಾನ ಮಾಡುವ ಮೂಲಕ ಮುರಗೆಮ್ಮ ಬಸಪ್ಪ ಹೂಗಾರ ಎಂಬವರು ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಗತಿಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ಮುರಗೆಮ್ಮ ಮೂಲತಃ ಕಮಡೊಳ್ಳಿ ಗ್ರಾಮದವರಾಗಿದ್ದು, ಪ್ರಸ್ತುತವಾಗಿ ಹುಬ್ಬಳ್ಳಿಯ ನವನಗರ ನಿವಾಸಿಯಾಗಿದ್ದರು. ಮುರಗೆಮ್ಮ ಅವರ ಪಾರ್ಥಿವ ಶರೀರವನ್ನು ಬೈಲಹೊಂಗಲದ ಡಾ. ರಾಮಣ್ಣನವರ ಚಾರಿಟಬಲ್ ಟ್ರಸ್ಟ್ ಮುಖಾಂತರ ಕೆಎಲ್‍ಇ ವಿಶ್ವವಿದ್ಯಾಲಯದ ಶ್ರೀ ಬಿಎಂಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿಗೆ ದಾನ ಮಾಡಲಾಗಿದೆ.

ಪ್ರಸ್ತುತ ವೈಜ್ಞಾನಿಕ ದಿನಮಾನಗಳಲ್ಲಿ ಕೂಡ ಅವೈಜ್ಞಾನಿಕ ಮೂಢನಂಬಿಕೆ ಆಚರಣೆಗಳಿಂದ ನಮ್ಮ ಜನರು ಭಯಭೀತರಾಗುತ್ತಾರೆ. ಅಲ್ಲದೆ ನಿಧನದ ನಂತರದಲ್ಲಿ ಇಲ್ಲಸಲ್ಲದ ಊಹಾಪೋಹಗಳಿಗೆ ತಲೆ ಕೆಡೆಸಿಕೊಳ್ಳುತ್ತಾರೆ. ಇಂತಹ ಅವೈಜ್ಞಾನಿಕ ಚಿಂತನೆಗಳನ್ನು ಹೋಗಲಾಡಿಸಿ ಮನುಷ್ಯ ದೇಹ ಸಾವಿನ ನಂತರವೂ ಹಲವಾರು ಉಪಯೋಗಕ್ಕೆ ಬರುತ್ತದೆ ಎಂಬುದಕ್ಕೆ ಮುರಗೆಮ್ಮನವರ ಮೃತ ದೇಹದ ದಾನ ಸೂಕ್ತ ನಿದರ್ಶನವಾಗಿದೆ.

ಸಾವಿನ ನಂತರದಲ್ಲಿ ಮನುಷ್ಯನ ದೇಹದಲ್ಲಿರುವ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅದೆಷ್ಟೋ ಅಂಧ ಕಣ್ಣುಗಳು ಸುಂದರ ಜಗತ್ತನ್ನು ನೋಡಲು ಸೂಕ್ತ ಮಾರ್ಗವಾಗಿದೆ. ಸಾವಿನ ನಂತರವೂ ಮನುಷ್ಯ ಬದುಕಿರಬಹುದು ಎಂಬಂತ ಮಾತಿಗೆ ದೇಹ ದಾನ ಹಾಗೂ ಸಾವಿನ ನಂತರದಲ್ಲಿ ಅಂಗಾಂಗ ದಾನ ಮಾಡುವುದು ವಿಶೇಷವಾಗಿದೆ.

Click to comment

Leave a Reply

Your email address will not be published. Required fields are marked *