Districts

ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ

Published

on

Share this

ಗದಗ: ಕ್ಷುಲ್ಲಕ ಕಾರಣಕ್ಕೆ 2 ಕುಟುಂಬಗಳ ಮಧ್ಯೆ ಮಾರಾಮಾರಿ ಗಲಾಟೆ ನಡೆದಿದ್ದು, ಈ ಹಿನ್ನೆಲೆ ಮೂವರಿಗೆ ಗಾಯವಾಗಿರುವ ಘಟನೆ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ.

ಹಳೆ ವೈಷಮ್ಯದಿಂದ ಕುಡಿದ ಮತ್ತಿನಲ್ಲಿ ಅಡಿವೆಪ್ಪ ಕಣ್ಣೂರು ಹಾಗೂ ಕೃಷ್ಣಾ ಸುಬ್ಬಣ್ಣವರ್ ಕುಟುಂಬದ ಮಧ್ಯೆ ತಡರಾತ್ರಿ ಜಗಳವಾಗಿದೆ. ಈ ವೇಳೆ ಇಬ್ಬರು ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಕೈಕೈ ಮಿಲಾಯಿಸಿದ್ದು, ಎರಡು ಕುಟುಂಬದ ಮೂವರಿಗೆ ಗಾಯಗಳಾಗಿವೆ. ಪ್ರಸ್ತುತ ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಘಟನೆಗೆ ಕಾರಣವೇನು?
ಸುಬ್ಬಣ್ಣವರ್ ಕುಟುಂಬದ ಯುವತಿಯನ್ನು, ಕಣ್ಣೂರು ಕುಟುಂಬದ ಯುವಕ ಪ್ರೀತಿಸಿ ಮದುವೆಯಾಗಿದ್ದಾರೆ. ಇದು ಅಂತರ್ಜಾತಿ ವಿವಾಹವಾದ್ದರಿಂದ ಎರಡು ಕುಟುಂಬದ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಆದರೆ ನಿನ್ನೆ ಕೃಷ್ಣಾ ಸುಬ್ಬಣ್ಣವರ್ ಕುಟುಂಬದ ಹೆಣ್ಣು ಮಕ್ಕಳನ್ನು ಅಡಿವೆಪ್ಪ ಕಣ್ಣೂರ್ ನಿಂದಿಸಿದ್ದರು ಎಂದು ಆರೋಪ ಮಾಡಲಾಗಿದೆ. ಈ ಹಿನ್ನೆಲೆ ಪ್ರಶ್ನೆ ಮಾಡಿದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇದನ್ನೂ ಓದಿ: ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರ

ಗದಗನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement