ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಫೇಕ್ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಮಾಡಿರುವ ಕಿಡಿಗೇಡಿಯೊಬ್ಬ ಸಿಕ್ಕಿಬಿದ್ದಿದ್ದಾನೆ.
ನವರಸನಾಯಕ ಜಗ್ಗೇಶ್ ಅವರು, ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿರುವ ಮಾಹಿತಿಯನ್ನ ರಿವೀಲ್ ಮಾಡಿದ್ದಾರೆ. ಅಚ್ಚರಿ ಅಂದರೆ ಸಾಕಷ್ಟು ನಟ ನಟಿಯರು ಪುನೀತ್ ಅಫೀಶಿಯಲ್ ಆಕೌಂಟ್ ಅಂತಾ ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದರು. ಸುಮಾರು 10 ಸಾವಿರಕ್ಕೂ ಜನ ಈ ಜನ ಅಪ್ಪು ಅಫೀಶಿಯಲ್ ಅಕೌಂಟ್ ಎಂದು ತಿಳಿದು ಫಾಲೋ ಮಾಡುತ್ತಿದ್ದರು.
ಟ್ವಿಟ್ಟರ್ ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿರುವ ಕಿಡಿಗೇಡಿಗಳ ಮೇಲೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸೆಲಿಬ್ರಿಟಿಗಳ ಬದುಕು ಎಷ್ಟು ಕಷ್ಟ ಅನ್ನೋದು ಇದಕ್ಕೆ. ಕಷ್ಟಪಟ್ಟು ನೋವು ಅಪಮಾನ ಸಹಿಸಿ ಬೆಳೆದ ಮೇಲೆ ಇಂತಹ ಸಮಯ ಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು. ಸ್ವತಃ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ. ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲಾ. ಇದಕ್ಕಿಂತ ಮೈಬಗ್ಗಿಸಿ ದುಡಿದು ತಿನ್ನಿ ಸ್ವಾಭಿಮಾನದಿಂದ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡುವವರ ವಿರುದ್ಧ ಕಿಡಿಕಾರಿದ್ದರು.
Celebrity ಬದುಕು ಎಷ್ಟುಕಷ್ಟ ಅನ್ನೊದು ಇದಕ್ಕೆ.!
ಕಷ್ಟಪಟ್ಟು ನೊವು ಅಪಮಾನ ಸಹಿಸಿಬೆಳೆದ ಮೇಲೆ ಇಂಥ ಸಮಯಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು.!
ಸ್ವತಹ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ.!
ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲಾ!
ಇದಕ್ಕಿಂತ ಮೈಬಗ್ಗಿಸಿ ದುಡಿದುತಿನ್ನಿ ಸ್ವಾಭಿಮಾನದಿಂದ.! https://t.co/P6Zlay16KX
— ನವರಸನಾಯಕ ಜಗ್ಗೇಶ್ (@Jaggesh2) July 3, 2018