ತುಮಕೂರು: ಮಾಜಿ ಸಚಿವ ಹಾಗೂ ಮಾಜಿ ಉಪಸಭಾಪತಿ ಸಿ.ವೀರಣ್ಣ (89) (C. Veeranna) ಅವರು ನಿಧನರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಕೊರಟಗೆರೆ (Koratagere) ತಾಲೂಕಿನ ಬುಕ್ಕ ಪಟ್ಟಣದ ನಿವಾಸದಲ್ಲಿ ಅವರು ವಿಶ್ರಾಂತಿಯಲ್ಲಿದ್ದರು. ಅಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಅಪರಿಚಿತರಿಂದ ಮನೆ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ – ಮನೆ ಕಿಟಕಿ, ಕಾರಿನ ಗಾಜು ಪುಡಿಪುಡಿ
ವೀರಣ್ಣ ಅವರು ಕೊರಟಗೆರೆ ಕ್ಷೇತ್ರದಿಂದ ಶಾಸಕರಾಗಿದ್ದರು. ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್ ಬೊಮ್ಮಾಯಿ ಸಂಪುಟಗಳಲ್ಲಿ ಸಚಿವರಾಗಿದ್ದರು. ಕೊರಟಗೆರೆ ತಾಲೂಕಿನ ಬುಕ್ಕ ಪಟ್ಟಣ ಗ್ರಾಮದಲ್ಲಿ ಮಕ್ಕಳ ಜೊತೆ ಕೃಷಿ ಜೀವನ ನಡೆಸುತಿದ್ದರು.
ಇಂದು (ಜು.25) ಸಂಜೆ 4 ಗಂಟೆಗೆ ಸ್ವಗ್ರಾಮ ಬುಕ್ಕಪಟ್ಟಣದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರೆವೇರಲಿದೆ. ಇದನ್ನೂ ಓದಿ: ವಿದ್ಯುತ್ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ – ಮಂಡ್ಯದಲ್ಲಿ ಹರಿಯಿತು ನೆತ್ತರು
