ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿಯ 2ನೇ ಮದುವೆ ವಿಚಾರ ತಮಿಳು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡಿತ್ತು. ಧನುಷ್ ಜೊತೆ ಸಂಬಂಧ ಕಡಿದುಕೊಂಡಿರುವ ಐಶ್ವರ್ಯ ರಜನಿಕಾಂತ್ (Aishwarya Rajinikanth), ಯುವನಟನ ಜೊತೆ ಶೀಘ್ರದಲ್ಲೇ ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗಿತ್ತು. ಈ ಮದುವೆಗೆ ರಜನಿ ವಿರೋಧವಿದೆ ಎಂದೂ ಸುದ್ದಿಯಾಗಿತ್ತು. ಮಗಳೊಂದಿಗೆ ಮುನಿಸಿಕೊಂಡಿದ್ದ ರಜನಿ ಮಾಲ್ಡೀವ್ಸ್ ಹಾರಿದ್ದಾರೆ ಎನ್ನುವುದು ಅಲ್ಲಿನ ಗುಸುಗುಸು.
ಧನುಷ್ (Dhanush) ಜೊತೆಗಿನ ಬಾಂಧವ್ಯ ಕಡಿದುಕೊಂಡಿದ್ದರ ಬಗ್ಗೆ ಮಗಳ ಮೇಲೆ ರಜನಿಗೆ (Rajinikanth) ತುಸು ಅಸಮಾಧಾನ ಇರುವುದು ನಿಜ. ಹಾಗಾಗಿಯೇ ಮತ್ತೆ ಧನುಷ್ ಮತ್ತು ಐಶ್ವರ್ಯರನ್ನು ಒಟ್ಟಾಗಿಸಲು ರಜನಿ ಪ್ರಯತ್ನಪಟ್ಟಿದ್ದೂ ಸುಳ್ಳಲ್ಲ. ಆದರೂ ರಜನಿಕಾಂತ್ ಆ ಪ್ರಯತ್ನವನ್ನು ನಿಲ್ಲಿಸಿಲ್ಲ. ಮಕ್ಕಳ ಮೇಲಿನ ಪ್ರೀತಿಗೆ ಮತ್ತೆ ಧನುಷ್ ಬರುತ್ತಾರೆ ಎನ್ನುವ ನಂಬಿಕೆಯಲ್ಲಿ ರಜನಿ ದಿನಗಳನ್ನು ಕಳೆಯುತ್ತಿದ್ದಾರೆ. ಇದನ್ನೂ ಓದಿ:ಕಂಗನಾ ರಣಾವತ್ ಹಿಂದೆ ಬಿದ್ದಿದ್ದಾನಂತೆ ಹೆಣ್ಣುಬಾಕ ನಟ
ಮಗಳು ಮತ್ತು ಅಳಿಯನ್ನು ಒಂದಾಗಿಸಲು ರಜನಿ ಈಗಲೂ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ನಡುವೆ ಐಶ್ವರ್ಯ ಮತ್ತೊಂದು ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಸಹಜವಾಗಿಯೇ ರಜನಿಗೆ ಕಿರಿಕಿರಿ ಉಂಟು ಮಾಡಿತ್ತು. ಹಾಗಂತ ಮಗಳ ಜೊತೆ ರಜನಿ ಮುನಿಸಿಕೊಂಡಿದ್ದಾರೆ ಎನ್ನುವುದು ಸುಳ್ಳು. ಏಕೆಂದರೆ ಜೈಲರ್ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಅಪ್ಪನ ಜೊತೆ ಲವಲವಿಕೆಯಿಂದಲೇ ಐಶ್ವರ್ಯ ಭಾಗಿಯಾಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೇ, ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಸಿನಿಮಾದಲ್ಲಿ ರಜನಿಕಾಂತ್ ಪಾತ್ರವೊಂದನ್ನು ಮಾಡಿದ್ದಾರೆ. ಆ ಸಿನಿಮಾದ ಶೂಟಿಂಗ್ ಅನ್ನು ಮೊನ್ನೆಯಷ್ಟೇ ಅವರು ಮುಗಿಸಿಕೊಟ್ಟಿದ್ದಾರೆ. ಅಲ್ಲಿಗೆ ಮತ್ತೊಂದು ಮದುವೆ, ಮಗಳ ಜೊತೆಗಿನ ಮುನಿಸು ಎಲ್ಲವೂ ಗಾಸಿಪ್ ಎಂದು ಸಾಬೀತು ಪಡಿಸಿದ್ದಾರೆ.
Web Stories