ಹಾಸನ: ಭ್ರಷ್ಟಾಚಾರ ಯಾರ್ಯಾರಿಂದ ಎಲ್ಲೆಲ್ಲಿ ಹುಟ್ಟಿಕೊಂಡಿದೆ. ಪಾಪ ಈಶ್ವರಪ್ಪ ಅವರ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್‍ನವರು ಈಗ ಮೇಲೆ ಹತ್ತಿ ಕುಣಿಯುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ.
ಹಾಸನದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಮೇಲೆ ಹತ್ತಿ ಕುಣಿಯದು ಬೇಡ, ನಿಮ್ಮ ಕಾಲದಲ್ಲಿ ಏನಾಗಿದೆ. ಈಶ್ವರಪ್ಪ ತಪ್ಪು ಮಾಡಿದ್ದರೆ ತಪ್ಪೇ. ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಿದ್ದರೆ ಸರ್ಕಾರ ಆ ಕುಟುಂಬಕ್ಕೆ ಪರಿಹಾರ ಕೊಡಬೇಕು. ಆ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ. ರಾಷ್ಟ್ರದ ಐಕ್ಯತೆಗೆ ಧಕ್ಕೆ ತರಬೇಡಿ, ಎರಡು ರಾಷ್ಟ್ರೀಯ ಪಕ್ಷಗಳಿಗೂ ಹೇಳುತ್ತೇನೆ. ಎಲ್ಲಾ ಸಮುದಾಯದವರು ಸೇರಿ ದೇಶ ಕಟ್ಟಬೇಕಿದೆ. ರಾಜಕೀಯಕ್ಕೋಸ್ಕರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಬೇರೆ ಬೇರೆ ಅಂತ ಮಾಡಲು ಹೋಗಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?
Advertisement
Advertisement
ನಾಲ್ಕು ದಿನ ಹಾಸನ ಜಿಲ್ಲೆಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ
ನಾಳೆ ಹಾಸನ ಜಿಲ್ಲೆಯ ಎರಡು ಕಡೆ ಜನತಾ ಜಲಧಾರೆ ಕಾರ್ಯಕ್ರಮ ನಡೆಯಲಿದೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರ ಕಟ್ಟೆ ಹಾಗೂ ಸಕಲೇಶಪುರ ತಾಲೂಕಿನ ಹೆನ್ನಲಿಯಲ್ಲಿ ಎತ್ತಿನಹೊಳೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಹಾಸನ ಜಿಲ್ಲೆಯ ಶ್ರೀರಾಮದೇವರ ಕಟ್ಟೆ, ಗೊರೂರು ಅಣೆಕಟ್ಟು, ವಾಟೆಹೊಳೆ, ಎತ್ತಿನಹೊಳೆ, ಯಗಚಿ ಡ್ಯಾಂನಲ್ಲಿ ಕಾರ್ಯಕ್ರಮ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಶಾಸಕರು, ತುಮಕೂರಿನ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಏ.20 ರಂದು ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ
Advertisement
Advertisement