ಚಿಕ್ಕಬಳ್ಳಾಪುರ: ಸಿಎಂ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಎಂ.ವೀರಪ್ಪಮೊಯ್ಲಿ ಟಾಂಗ್ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ವಿರುದ್ಧ ಹೇಳಿಕೆಗೆ ಪ್ರತಿಕ್ರಿಯಿಸಿ ಈಶ್ವರಪ್ಪ ಮೊದಲು ಅವರ ಆರೋಗ್ಯ ಕಾಪಾಡಿಕೊಂಡರೇ ಸಾಕು. ಅವರು ಮಾತನಾಡುವುದು ನೋಡಿದರೆ ಎಲ್ಲೋ ಅವರ ಆರೋಗ್ಯ ಕೆಟ್ಟಿರಬೇಕು. ಈಶ್ವರಪ್ಪ ಆರೋಗ್ಯ ಕಾಪಾಡಿಕೊಳ್ಳಲಿ ಅಂತ ದೇವರಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ನೆಗೆದು ಬಿಳ್ತಾರೆ: ಈಶ್ವರಪ್ಪ
Advertisement
Advertisement
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಜೊತೆ ಮೊಯ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷಗಳು ಭಾವನಾತ್ಮಕವಾಗಿ ಒಂದಾಗಿದ್ದರಿಂದ ಕ್ಷೇತ್ರದಲ್ಲಿ ಈ ಬಾರಿ ತಮ್ಮ ಗೆಲುವಿನ ಹಾದಿ ಸುಗಮವಾಗಿದೆ ಅಂತ ತಿಳಿಸಿದರು.
Advertisement
Advertisement
ತನ್ನ ವಿರುದ್ಧ ಮುನಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನೇಗೌಡ ಮನವೊಲಿಸುವಲ್ಲಿ ಮೊಯ್ಲಿ ಸಫಲರಾಗಿದ್ದಾರೆ. ನಾಯಕರು ಸಹಮತದಿಂದ ತಮ್ಮ ಪರ ಕೆಲಸ ಮಾಡಲು ನಿರ್ಧರಿಸಿದ್ದು ತಮಗೆ ಅತೀವ ಸಂತಸ ತಂದಿದೆ. ಎಲ್ಲಾ ಜೆಡಿಎಸ್ ಮುಖಂಡರ ಗೊಂದಲಗಳು ನಿವಾರಣೆಯಾಗಿದ್ದು ಜೆಡಿಎಸ್ ಮುಖಂಡರೆಲ್ಲರೂ ತಮಗೆ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಕೇವಲ ಮತ ಲೆಕ್ಕಾಚಾರದಲ್ಲಷ್ಟೇ ಅಲ್ಲ ಭಾವನಾತ್ಮಕವಾಗಿಯೂ ಕಾಂಗ್ರೆಸ್-ಜೆಡಿಎಸ್ ಮುಖಂಡರು ಸಮ್ಮಿಲನರಾಗಿದ್ದು, ಈ ಬಾರಿ 6 ಲಕ್ಷಕ್ಕೂ ಅಧಿಕ ಮತಗಳಿಂದ ತಾವು ಗೆಲ್ಲುವುದಾಗಿ ತಿಳಿಸಿದರು. ಇದೇ ವೇಳೆ ಮೊಯ್ಲಿ ಹಾಗೂ ನನ್ನ ನಡುವೆ ಇದ್ದ ಎಲ್ಲಾ ಭಿನ್ನಾಭಿಪ್ರಾಯಗಳು ಶಮನವಾಗಿದ್ದು, ಕ್ಷೇತ್ರದ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಸಜ್ಜನ ರಾಜಕಾರಣಿ ಮೊಯ್ಲಿ ಪರ ಮತಯಾಚನೆ ಮಾಡಬೇಕು ಅಂತ ಮುನೇಗೌಡರು ಮನವಿ ಮಾಡಿಕೊಂಡರು.