ಬೆಂಗಳೂರು: ಉಡುಪಿ (Udupi), ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳಿಗೆ ನಾಳೆ ಈದ್ ಮಿಲಾದ್ (Eid Milad) ರಜೆ ಘೋಷಣೆ ಮಾಡಲಾಗಿದೆ.
26 ರ ಬದಲು 25 ರಂದೇ ಈದ್ ಮಿಲಾದ್ ರಜೆ ನೀಡಲಾಗಿದೆ. ನಾಳೆ ಸಾರ್ವತ್ರಿಕ ರಜೆ ಘೋಷಿಸಲು ಎರಡೂ ಜಿಲ್ಲೆಗಳ ಡಿಸಿಗಳಿಗೆ ಸರ್ಕಾರ ಸೂಚನೆ ನೀಡಿದೆ. ರಾಜ್ಯಾದ್ಯಂತ ಆ.26 ರಂದು ಈದ್ ಮಿಲಾದ್ ಸಾರ್ವತ್ರಿಕ ರಜೆ ಇದೆ. ಆದರೆ, ಕರಾವಳಿಯಲ್ಲಿ ನಾಳೆಯೇ ಈದ್ ಮಿಲಾದ್ ಹಿನ್ನೆಲೆ ರಜೆ ನೀಡಲಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಆ.27ರಿಂದ ರಾಯರ 355ನೇ ಆರಾಧನಾ ಮಹೋತ್ಸವ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಕೋರಿಕೆ ಮೇರೆಗೆ ಈದ್ ಮಿಲಾದ್ ಹಬ್ಬದ ರಜೆಯನ್ನು ಸ್ಥಳೀಯ ಪರಿಸ್ಥಿತಿಗಳಿಗನುಸಾರವಾಗಿ ಆ.26ರ ಬದಲಿಗೆ ಆ.25 ರಂದೇ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
