Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Economic Survey| ಅಮೆರಿಕ ಸುಂಕ ಹೇರಿದ್ರೂ ರಫ್ತು ಹೆಚ್ಚಳ, 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ ವಿನಿಮಯ ಮೀಸಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | Economic Survey| ಅಮೆರಿಕ ಸುಂಕ ಹೇರಿದ್ರೂ ರಫ್ತು ಹೆಚ್ಚಳ, 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ ವಿನಿಮಯ ಮೀಸಲು

Latest

Economic Survey| ಅಮೆರಿಕ ಸುಂಕ ಹೇರಿದ್ರೂ ರಫ್ತು ಹೆಚ್ಚಳ, 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ ವಿನಿಮಯ ಮೀಸಲು

Public TV
Last updated: January 29, 2026 1:54 pm
Public TV
Share
3 Min Read
Economic Survey 2026 Nirmala Sitharaman
SHARE

– ಬಜೆಟ್‌ಗೂ ಮುನ್ನ ಆರ್ಥಿಕ ಸಮೀಕ್ಷೆ ಮಂಡನೆ

ನವದೆಹಲಿ: 2027 ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 6.8%-7.2% ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಆರ್ಥಿಕ ಸಮೀಕ್ಷೆ (Economic Survey 2026) ಹೇಳಿದೆ.

ಫೆ.1 ರಂದು ಬಜೆಟ್‌ ಮಂಡನೆಯಾಗಲಿರುವ (Union Budget) ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಇಂದು ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?
– ಜಾಗತಿಕ ವ್ಯಾಪಾರ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಭಾರತದ ಒಟ್ಟು ರಫ್ತುಗಳು (ಸರಕು ಮತ್ತು ಸೇವೆಗಳು) 2025ರ ಹಣಕಾಸು ವರ್ಷದಲ್ಲಿ ದಾಖಲೆಯ 825.3 ಬಿಲಿಯನ್‌ ಡಾಲರ್‌ಗೆ ತಲುಪಿದೆ. 2026ರ ಹಣಕಾಸು ವರ್ಷದಲ್ಲೂ ಇದೇ ವೇಗದಲ್ಲಿ ಮುಂದುವರಿಯುತ್ತಿದೆ. ಅಮೆರಿಕದ ಹೆಚ್ಚಿನ ಸುಂಕ ವಿಧಿಸಿದರೂ ಸರಕುಗಳ ರಫ್ತು 2.4% (ಏಪ್ರಿಲ್-ಡಿಸೆಂಬರ್ 2025), ಸೇವೆಗಳ ರಫ್ತು  6.5% ಏರಿಕೆಯಾಗಿದೆ.

– 2026 ರಲ್ಲಿ ನೈಜ ಜಿಡಿಪಿ ಬೆಳವಣಿಗೆ 7.4% ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ದೇಶೀಯ ಬೇಡಿಕೆಯೇ ಹೆಚ್ಚಾಗಿ ಬೆಳವಣಿಗೆಯಾಗುತ್ತದೆ. ಉತ್ಪಾದನಾ ಚಟುವಟಿಕೆ ಬಲಗೊಂಡಿದೆ ಮತ್ತು ಕೃಷಿ ಸ್ಥಿರತೆಯನ್ನು ಒದಗಿಸಿದೆ.

– ಏಪ್ರಿಲ್-ಡಿಸೆಂಬರ್ 2025ರ ಸರಕು ಆಮದು 5.9% ರಷ್ಟು ಹೆಚ್ಚಾಗಿದೆ. ಚಾಲ್ತಿ ಖಾತೆ ಕೊರತೆಯು ಜಿಡಿಪಿಯ 0.8% ರಷ್ಟಿದೆ. ಜನವರಿ 16, 2026 ರ ಹೊತ್ತಿಗೆ 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ  ವಿನಿಮಯ ಮೀಸಲನ್ನು ಭಾರತ ಹೊಂದಿದೆ.

– ಕೋವಿಡ್‌ ನಂತರ ಸರ್ಕಾರ ಹಂತ ಹಂತವಾಗಿ ಬಂಡವಾಳ ವೆಚ್ಚವನ್ನು ಏರಿಕೆ ಮಾಡುತ್ತಿದೆ. ಕೋವಿಡ್‌ ಪೂರ್ವ ಅವಧಿಯಲ್ಲಿ 1.7% ಇದ್ದ ವೆಚ್ಚ ನಂತರ ಜಿಡಿಪಿಯ 2.9% ರಷ್ಟು ಏರಿಕೆಯಾಗಿತ್ತು. 2025ರ ಹಣಕಾಸು ವರ್ಷದಲ್ಲಿ 4%ಗೆ ಏರಿಕೆಯಾಗಿದೆ.

– ಹಣಕಾಸು ಕೊರತೆಯು 2021ರ ಹಣಕಾಸು ವರ್ಷದಲ್ಲಿ ಜಿಡಿಪಿಯ 9.2% ಇತ್ತು. ಆದರೆ 2025 ರಲ್ಲಿ ಇದು 4.8% ಇಳಿಕೆಯಾಗಿದೆ. 2026 ರಲ್ಲಿ 4.4% ಇಳಿಕೆ ಮಾಡುವಂತೆ ಬಜೆಟ್‌ನಲ್ಲಿ ಗುರಿಯನ್ನು ಹಾಕಲಾಗಿದೆ. ಈ ಅವಧಿಯಲ್ಲಿ ಆದಾಯ ಕೊರತೆಯು ಸ್ಥಿರವಾಗಿ ಕಡಿಮೆಯಾಗಿದೆ

– 2027ರಲ್ಲಿ ಹಣದುಬ್ಬರ ಹೆಚ್ಚಾಗಿರಬಹುದು ಆದರೆ ಕಳವಳಕಾರಿಯಲ್ಲ ಎಂದು ಸಮೀಕ್ಷೆ ಹೇಳಿದೆ. ಮುಖ್ಯವಾಗಿ ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯಾಗಬಹುದು. ಪ್ರಸ್ತುತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಮಧ್ಯಮ ಪ್ರಮಾಣದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಗದಿ ಮಾಡಿರುವ 4% ±2% ಗುರಿ ವ್ಯಾಪ್ತಿಯಲ್ಲೇ ಇರುವ ನಿರೀಕ್ಷೆಯಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಬೆಲೆಗಳು ಏರಿಕೆಯಾದ ಕಾರಣ ಭಾರತದ ಆರ್ಥಿಕತೆಯು ಸ್ಥಿರವಾಗಿ ಮುಂದುವರೆಯುತ್ತಿದೆ.

– 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ನಿರುದ್ಯೋಗ ದರವು ಸ್ಥಿರವಾಗಿ ಕಡಿಮೆಯಾಗಿದೆ. 2017-18 ರಲ್ಲಿ 6% ರಿಂದ 2023-24 ರಲ್ಲಿ 3.2% ಕ್ಕೆ ಇಳಿದಿದೆ. ಇದಲ್ಲದೆ ನಗರ ನಿರುದ್ಯೋಗ ದರವು ಸ್ವಲ್ಪ ಸುಧಾರಣೆಯನ್ನು ಕಂಡಿದೆ. ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಸರ್ಕಾರವು ತನ್ನ ಬಂಡವಾಳ ವೆಚ್ಚದ 75% ಅನ್ನು ರಕ್ಷಣಾ, ರೈಲ್ವೆ ಮತ್ತು ರಸ್ತೆ ಸಾರಿಗೆ ಮೇಲೆ ಹೂಡಿಕೆ ಮಾಡಿದೆ.

– ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಪ್ರಗತಿ ಕಂಡುಬಂದಿದೆ. ಸುಂಕ ವಿಧಿಸಿದ್ದರಿಂದ ಕೆಲ ವಲಯಗಳ ಮೇಲೆ ಪರಿಣಾಮ ಬಿದ್ದರೂ ಭಾರತದ ರಫ್ತುಗಳನ್ನು ಪರ್ಯಾಯವಾಗಿ ಬೇರೆ ಕಡೆಗೆ ತಿರುಗಿಸಲಾಗಿದೆ.

– ಭಾರತವು ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಹಲವಾರು ಸವಾಲುಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ನಾಲ್ಕು ಟ್ರಿಲಿಯನ್ ಡಾಲರ್ ಗಡಿಯನ್ನು ದಾಟುವತ್ತ ವೇಗವಾಗಿ ಸಾಗುತ್ತಿದೆ. ಟ್ರಂಪ್ ಟ್ಯಾರಿಫ್ ಯುದ್ಧದ ನಡುವೆಯೂ ಯುರೋಪ ಒಕ್ಕೂಟದ ಜೊತೆಗಿನ ಒಪ್ಪಂದ ಉತ್ಪಾದನಾ ವಲಯಕ್ಕೆ ಒಂದಷ್ಟು ರಿಯಾಯಿತಿ ಸಿಗಬಹುದು ಎಂದು ಸಮೀಕ್ಷೆ ಹೇಳಿದೆ.

TAGGED:Economic SurveyNirmala Sitharamanunion budgetಆರ್ಥಿಕ ಸಮೀಕ್ಷೆಜಿಡಿಪಿನಿರ್ಮಲಾ ಸೀತಾರಾಮನ್ಭಾರತ
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

Raichur Man Death Heat Stroke Suspected copy
Districts

ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು – ಬಿಸಿಲಿನ ತಾಪಮಾನಕ್ಕೆ ಕುಸಿದು ಬಿದ್ದಿರುವ ಶಂಕೆ

Public TV
By Public TV
21 minutes ago
Massive fire breaks out in plastic godown PG girls in Bengaluru save their lives by jumping over wall
Bengaluru City

ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಅಗ್ನಿ ಅವಘಡ- ಗೋಡೆ ಹಾರಿ ಜೀವ ಉಳಿಸಿಕೊಂಡ ಬೆಂಗಳೂರಿನ ಪಿಜಿ ಯುವತಿಯರು

Public TV
By Public TV
52 minutes ago
Indonesia Train Accident
Crime

ಇಂಡೋನೇಷ್ಯಾದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ – 7 ಪ್ರಯಾಣಿಕರು ಸಾವು, 81 ಮಂದಿಗೆ ಗಾಯ

Public TV
By Public TV
2 hours ago
Rs 1 lakh to close a pothole in Bengaluru GBAs expensive pothole business exposed 2
Bengaluru City

ಅಬ್ಬಬ್ಬಾ.. ಬೆಂಗಳೂರಿನಲ್ಲಿ ಒಂದು ಗುಂಡಿ ಮುಚ್ಚಲು 1 ಲಕ್ಷ!- ಬಯಲಾಯ್ತು ಜಿಬಿಎ ‘ದುಬಾರಿ’ ಗುಂಡಿ ಬಿಸಿನೆಸ್!

Public TV
By Public TV
2 hours ago
BESCOM Electricity Bill Name Change
Bengaluru City

ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್ – ಮನೆಯಿಂದಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ

Public TV
By Public TV
2 hours ago
Karnataka Government bus overturns near Challakere Chitradurga 44 passengers rescued 1
Bellary

ಚಳ್ಳಕೆರೆ ಬಳಿ ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಪಲ್ಟಿ- 44 ಪ್ರಯಾಣಿಕರು ಪಾರು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?