ಬೆಂಗಳೂರು: ಎಣ್ಣೆಮತ್ತಲ್ಲಿ ಬಂದು ಆಂಧ್ರದ (Andhra Pradesh) ಐಎಎಸ್ ಅಧಿಕಾರಿಯೊಬ್ಬರು (IAS Officer) ಪೊಲೀಸರ ಮೇಲೆ ದರ್ಪ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಆಂಧ್ರದ ಕುಪ್ಪಂ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ವಿಕಾಸ್ ಮರ್ಮತ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಜಾರಕಿಹೊಳಿಗೆ ಸ್ಟಿಂಗ್ ಮಾಡಿದವರೇ ಸಿದ್ದರಾಮಯ್ಯ ಮೇಲೆ ಮಾಡಿದ್ದಾರೆ: ಕೆ.ಎನ್. ರಾಜಣ್ಣ
ಅ.9ರಂದು ಕಮಿಷನರ್ ಸೂಚನೆ ಮೇರೆಗೆ ಬೆಂಗಳೂರಿನಾದ್ಯಂತ ಪಬ್‌ಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ರೆಸಿಡೆನ್ಸಿ ರಸ್ತೆಯ ಪಬ್‌ವೊಂದರಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಐಡಿ ತೋರಿಸುವಂತೆ ವಿಕಾಸ್ ಮರ್ಮತ್ ಅವರನ್ನು ಕೇಳಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಕಾಸ್ ಮರ್ಮತ್ ಅವಾಜ್ ಹಾಕಿದ್ದಾರೆ. ಅಲ್ಲದೆ, ಇನ್ಸ್ಪೆಕ್ಟರ್ ಅರುಣ್ ಸೋಲಂಕಿ ಹಾಗು ಸಿಬ್ಬಂದಿಗಳ ಮೇಲೆ ದರ್ಪ ತೋರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ (Cubbon Park) ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ದೆಹಲಿ ಸಭೆ ವಿಫಲ: ರಾಷ್ಟ್ರೀಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರ ಆಕ್ರೋಶ

