ಬೆಂಗಳೂರು: ನಿದ್ದೆಗಣ್ಣಿನಲ್ಲಿ ತೂಕಡಿಸಿ ಚಾಲಕನ ನಿಯಂತ್ರಣ ತಪ್ಪಿ ಮರಳು ಲಾರಿಯೊಂದು (Sand Lorry) ಮನೆಗೆ ಡಿಕ್ಕಿ ಹೊಡೆದು ಭೀಕರವಾಗಿ ಪಲ್ಟಿಯಾದ ಪರಿಣಾಮ ಚಾಲಕ ಲಾರಿ ಕೆಳಗೆ ಸಿಲುಕಿಕೊಂಡ ಘಟನೆ ಯಲಹಂಕದ (Yelahanka) ಮಾದನಹಳ್ಳಿ ಬಳಿ ಸೋಮವಾರ ಮುಂಜಾನೆ ನಡೆದಿದೆ.
ಯಲಹಂಕ ಕಡೆಯಿಂದ ಮರಳು ಹೊತ್ತು ಸಾಗುತ್ತಿದ್ದ ಲಾರಿ, ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಹಾದಿ ತಪ್ಪಿ ರಸ್ತೆ ಪಕ್ಕದ ಮನೆಗೆ ಬಲವಾಗಿ ಗುದ್ದಿದೆ. ರಭಸಕ್ಕೆ ಮನೆಯ ಹೊರಗೋಡೆ ಸಂಪೂರ್ಣ ಜಖಂಗೊಂಡಿದ್ದು, ಒಳಗಿದ್ದ ಕೆಲವು ವಸ್ತುಗಳು ಧ್ವಂಸಗೊAಡಿವೆ. ಘಟನೆ ನಡೆದಾಗ ಮನೆಯಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಮನೆಗೆ ಗುದ್ದಿದ ಲಾರಿ ಸ್ಥಳದಲ್ಲೇ ಪಲ್ಟಿಯಾಗಿದೆ. ಪರಿಣಾಮ, ಚಾಲಕ ಪಲ್ಟಿಯಾದ ಲಾರಿಯ ಕ್ಯಾಬಿನ್ ಅಡಿಯಲ್ಲೇ ಸಿಲುಕಿಕೊಂಡಿದ್ದು, ಆತನನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಇದನ್ನೂ ಓದಿ: ʻನೀನು ಕೊಲ್ಲದಿದ್ದರೆ ನಾನೇ ಕೊಲ್ತೀನಿʼ – ಪತಿಯನ್ನೇ ಮುಗಿಸಲು ಪತ್ನಿ-ಪ್ರಿಯಕರನ ಸ್ಕೆಚ್; ಚಾಟ್ ನೋಡಿ ಪೊಲೀಸರ ಮೊರೆ ಹೋದ ಗಂಡ!
ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಲಾರಿಯನ್ನು ತೆರವುಗೊಳಿಸಲು ಶ್ರಮಿಸಿದರು. ಆರಂಭದಲ್ಲಿ ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಲು ಯತ್ನಿಸಲಾಯಿತಾದರೂ, ಬಳಿಕ ಗ್ಯಾಸ್ ಕಟರ್ ಬಳಸಿ ಲಾರಿಯ ಮೇಲ್ಭಾಗವನ್ನು ಕತ್ತರಿಸಿ ಚಾಲಕನನ್ನು ರಕ್ಷಿಸಿದ್ದಾರೆ. ತುರ್ತು ಚಿಕಿತ್ಸೆಗಾಗಿ ಸ್ಥಳದಲ್ಲೇ ಅಂಬುಲೆನ್ಸ್ ಹಾಗೂ ವೈದ್ಯಕೀಯ ತಂಡ ಬೀಡುಬಿಟ್ಟು ಚಾಲಕನನ್ನ ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿರಾಜಪೇಟೆಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ – ಗ್ರಾಮಸ್ಥರಿಂದ ಪ್ರತಿಭಟನೆ

