ಕನ್ನಡ ಸಿನಿಮಾ ರಂಗದ ಹೆಸರಾಂತ ಹಾಸ್ಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಅವರ ಹುಟ್ಟು ಹಬ್ಬಕ್ಕೆ (Birthday) ನಾಡಿನ ಅನೇಕ ದಿಗ್ಗಜರು, ಕಲಾವಿದರು, ರಾಜಕಾರಣಿಗಳು ಶುಭಾಶಯ ಕೋರಿದ್ದಾರೆ. ಜೊತೆಗೆ ಅವರು ನಟಿಸಿದ ಸಿನಿಮಾ ತಂಡದವರು ಸರ್ ಪ್ರೈಸ್ ರೀತಿಯಲ್ಲಿ ಉಡುಗೊರೆಯನ್ನು ನೀಡಿದ್ದಾರೆ. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದ ‘ರಂಗನಾಯಕ’ (Ranganayaka) ಚಿತ್ರ ತಂಡ ಮತ್ತು ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ (Raghavendra Stores) ಚಿತ್ರತಂಡ ಇಂದು ವಿಭಿನ್ನ ರೀತಿಯಲ್ಲಿ ಜಗ್ಗೇಶ್ ಹುಟ್ಟು ಹಬ್ಬ ಆಚರಿಸಿವೆ.
Advertisement
ಗುರು ಪ್ರಸಾದ್ ನಿರ್ದೇಶನದಲ್ಲಿ ತಯಾರಾದ ‘ರಂಗನಾಯಕ’ ಚಿತ್ರದ ಹೊಸ ಪೋಸ್ಟರ್ ಅನ್ನು ಜಗ್ಗೇಶ್ ಹುಟ್ಟು ಹಬ್ಬಕ್ಕಾಗಿಯೇ ರಿಲೀಸ್ ಮಾಡಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಏಪ್ರಿಲ್ 28 ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ: ಇಂದು ಜಿನಿವಾ ನಗರದಲ್ಲಿ ‘ಕಾಂತಾರ’ ಚಿತ್ರದ ಪ್ರದರ್ಶನ
Advertisement
Advertisement
ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು ಜಗ್ಗೇಶ್. ಕುಟುಂಬ ಸಮೇತ ಪ್ರಧಾನಿಯನ್ನು ಭೇಟಿ ಮಾಡಿ, ಅವರ ಆರ್ಶಿವಾದ ಪಡೆದಿದ್ದರು. ತಾವು ಆರಾಧಿಸುವ ರಾಯರ ಮೂರ್ತಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿ ಬಂದಿದ್ದರು. ಆ ಕ್ಷಣವನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದರು.
Advertisement
ಈ ಬಾರಿಯ ಹುಟ್ಟು ಹಬ್ಬದ ಮತ್ತೊಂದು ವಿಶೇಷ ಎಂದರೆ ಜಗ್ಗೇಶ್ ಇದೀಗ 60ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅರವತ್ತನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರು ವಿಶೇಷ ಪೂಜೆ ಮತ್ತು ರಾಯರ ದರ್ಶನಕ್ಕೂ ಹೋಗಿ ಬಂದಿದ್ದಾರೆ. ಜಗ್ಗೇಶ್ ಅವರಿಗೆ ಇಡೀ ಚಿತ್ರತಂಡ ಶುಭಾಶಯ ತಿಳಿಸಿದೆ.