– ಉತ್ತರ ಕೊಡಲ್ಲ ಅಂದ್ರೆ ನಿಮ್ಮನ್ನ ಬೀದಿಲಿ ತಂದು ನಿಲ್ಲಿಸ್ತೀನಿ ಅಂತ ವಾರ್ನಿಂಗ್
ಹಾಸನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹಾಗೂ ವಿರುದ್ದವೇ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ (Devaraje Gowda) ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಆರ್‌ಎಸ್‌ಎಸ್ ಹೈಕಮಾಂಡ್. ಪರಿಷತ್ ಚುನಾವಣೆಗೆ ಕೂಡ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹಿರಿಯ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಇಂತಹ ವ್ಯಕ್ತಿ ಹಾಕಿದರೆ ಗೆಲ್ತಾರೆ ಅನ್ನೋ ತೀರ್ಮಾನವನ್ನ ರಾಜ್ಯ ಅಧ್ಯಕ್ಷರು ಮಾಡ್ತಾರೆ. ನಮ್ಮ ಪಕ್ಷದ ಚಿಹ್ನೆ ಮೇಲೆ ಗೆದ್ದ ಎಲ್ಲರಿಗೂ ಮಾತನಾಡಬೇಕು. ಉಚ್ಚಾಟನೆ ಆದವರನ್ನು ಮಾತಾಡಿಸಬೇಕು. ವೈಮಮಸ್ಸು ಮರೆತು ಮಾತನಾಡೋದು ವಿಜಯೇಂದ್ರ ಹಾಗೂ ಆರ್.ಅಶೋಕ ಜವಾಬ್ದಾರಿ ಆಗಿತ್ತು ಎಂದಿದ್ದಾರೆ. ಇದನ್ನೂ ಓದಿ: MLC Election | ಅಡ್ಡ ಮತದಾನಕ್ಕೆ ಅಮಿತ್ ಶಾ ಗರಂ – ಫೋನ್‌ನಲ್ಲಿ ಹೆಚ್‌ಡಿಕೆ ಜೊತೆ ಚರ್ಚೆ

ವಿಜಯೇಂದ್ರ ತಮ್ಮ ಜೊತೆ ಇರುವ ಯಾರೋ ಅವಿವೇಕಿ ಸಲಹೆ ಕೊಟ್ಟ ಎಂದು ನೀವು ಎಲ್ಲರ ಮತ ಕೇಳಿಲ್ಲ. ನಿಮಗೆ ಯಾವ ನೈತಿಕತೆ ಇದೆ. ರಾಜ್ಯಾದ್ಯಕ್ಷರಾಗಿ ನಮ್ಮ ಪಕ್ಷದಿಂದ ಗೆದ್ದ ಶಾಸಕರನ್ನ ಏಕೆ ಮಾತನಾಡಿಸಲಿಲ್ಲ? ನಮ್ಮ ಪಕ್ಷವನ್ನು ಸಂಪೂರ್ಣ ಮುಳಗಿಸಬೇಕು ಎಂದುಕೊಂಡಿದ್ದೀರಾ? ಡಿ.ಕೆ ಶಿವಕುಮಾರ್ ಅವರ ಜೊತೆ ಏನಾದ್ರು ಒಳ ಒಪ್ಪಂದ ಆಗಿದೆಯಾ? ಇಬ್ಬರೂ ಸೇರಿ ಹೊಸ ಪಕ್ಷ ಕಟ್ಟುವ ಚರ್ಚೆ ಏನಾದ್ರು ಮಾಡಿದ್ದೀರಾ? ಹಾದಿಲಿ ಬೀದಿಲಿ ಹೋಗೋರ್ಗೆ ಉತ್ತರ ಕೊಡಲ್ಲ ಅಂದರೆ ನಿಮ್ಮನ್ನ ಬೀದಿಲಿ ತಂದು ನಿಲ್ಲಿಸ್ತೀನಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಹಾಸನದ ಒಬ್ಬ ʻಮಹಾನ್ ನಾಯಕʼ ನಿಮ್ಮ ಜೊತೆ ಸೇರಿದ್ದಾನೆ. ಯಾವುದೊ ಕಜ್ಜಿ ನಾಯಿಗಳಿಂದ ನನ್ನ ವಿರುದ್ಧ ಮಾತಾಡಿಸುತ್ತಾನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ತರಬೇಕು, ಯತ್ನಾಳ್‌ರನ್ನ ವಿಪಕ್ಷ ನಾಯಕನನ್ನಾಗಿ ಮಾಡಬೇಕು: ಕುಮಾರ್ ಬಂಗಾರಪ್ಪ

ವಾಲ್ಮಿಕಿ, ಮುಡಾ ಹಗರಣದಲ್ಲಿ ಸರಿಯಾಗಿ ಹೋರಾಟ ಮಾಡಲಿಲ್ಲ, ಮಾಡಿದ್ದರೆ ಈ ಸರ್ಕಾರ ಪತನ ಆಗೋದು. ನಮ್ಮ ಪಕ್ಷದ ಮೇಲೆ ವೈಮನಸ್ಸು ಇದ್ದರೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಕೊಡಿ. ವಿಜಯೇಂದ್ರ ಬಂದ ಮೇಲೆ ಎಷ್ಟೋ ಜನ ನಿಷ್ಟಾವಂತ ಕಾರ್ಯಕರ್ತರು ಮೂಲೆ ಸೇರಿದ್ದಾರೆ. ವಿಪಕ್ಷ ನಾಯಕ ಅಶೋಕ್ ಯಾಕೆ ಶಾಸಕರನ್ನ ಹಿಡಿತಕ್ಕೆ ತಗೊಳ್ಳೋಕೆ ಆಗಲಿಲ್ಲ, ಅವರು ಕಾರ್ಯಕರ್ತರ ಕಷ್ಟ ಸುಖ ಕೇಳಿದ್ದೀರಾ? ಹಾಸನದ ಇಬ್ಬರು ಶಾಸಕರ ಕ್ರಾಸ್‌ವೋಟ್ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಸರಿಯಾಗಿ ವಿಚಾರಣೆ ಮಾಡಿದ್ರೆ ಕ್ರಮ ಆಗುತ್ತೆ. ಅಧಿಕಾರ ಇದ್ದವರ ಜೊತೆ ಕಮಿಟ್ಮೆಂಟ್ ಮಾಡಿಕೊಂಡು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದೀರಾ? ನಾನು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ವಿಜಯೇಂದ್ರ ಹಾಗೂ ಆರ್.ಅಶೋಕ್‌ರನ್ನ ವಿಚಾರಣೆ ಮಾಡಬೇಕು. ಸೋಲಿನ ನೈತಿಕ ಹೊಣೆಯನ್ನು ಅಶೋಕ್ ಹಾಗೂ ವಿಜಯೇಂದ್ರ ಹೊರಬೇಕು ಎಂದು ಒತ್ತಾಯಿಸಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾ ಹಿಂದೆ ಪ್ರೀತಂ ಗೌಡ
ಹಾಸನದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಹಿಂದೆ ಬೇರೆ ಯಾರೂ ಇಲ್ಲಾ, ಇರೋದೆ ಪ್ರೀತಂ ಗೌಡ. ಸರ್ಕಾರಿ ಗೋಮಾಳ ಬೇರೆಯವರ ಹೆಸರಿಗೆ ಬರೆಸಿಕೊಂಡಿರೋದು ಬೇರೆ ಯಾರು ಅದು ಪ್ರೀತಂ ಗೌಡ. ನಾನು ಓಪನ್ ಆಗೇ ಹೇಳ್ತೀನಿ. ಮುಂದೆ ಒಂದೊಂದೇ ದಾಖಲೆ ಬಿಡ್ತಿನಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಜಿ.ಟಿ.ದೇವೇಗೌಡ
