– ಅನ್ನಪೂರ್ಣ ತುಕಾರಾಂಗೆ ಸಿಗುತ್ತಾ ʻಮಂತ್ರಿ ಗಿರಿʼ?
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡ್ತಿದ್ದ ಸಚಿವ ನಾಗೇಂದ್ರ (B Nagemdra) ರಾಜೀನಾಮೆ ಗದ್ದಲಕ್ಕೆ ಬ್ರೇಕ್ ಬೀಳೋ ಲಕ್ಷಣಗಳು ಕಾಣ್ತಿವೆ. ನಾಗೇಂದ್ರ ವಿರುದ್ಧ ಬಿಜೆಪಿ ಪಾದಯಾತ್ರೆಗೆ ಮುಂದಾಗಿರೋ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋದು ಫಿಕ್ಸ್ ಎನ್ನಲಾಗಿದೆ.
ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ನಾಗೇಂದ್ರ ರಾಜೀನಾಮೆ ಕೊಡುವ ಮುನ್ಸೂಚನೆ ಸಿಕ್ಕಿದ್ದು, ನಾಗೇಂದ್ರ ರಾಜೀನಾಮೆಗೆ ಹೈಕಮಾಂಡ್ ಕೂಡ ಗ್ರೀನ್‌ಸಿಗ್ನಲ್ ಕೊಟ್ಟಿದೆ ಎನ್ನಲಾಗಿದೆ.

ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿ (Rahul Gandhi) ಭೇಟಿ ಮಾಡಿದ ಸಿಎಂ ಡಿಕೆ ಶಿವಕುಮಾರ್ (DK Shivakumar) ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ರು. ಈ ಮಧ್ಯೆ, ನಾಗೇಂದ್ರರಿಂದ ತೆರವಾಗುವ ಸ್ಥಾನಕ್ಕೆ ಕಂಪ್ಲಿ ಶಾಸಕ ಗಣೇಶ್ ಅಥವಾ ಅನ್ನಪೂರ್ಣ ತುಕಾರಾಂಗೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ವಿಪಕ್ಷ ನಾಯಕ ಅಶೋಕ್, ಬಿಜೆಪಿ ನಾಯಕರು ಕೂಡ ನಮ್ಮ ಪಾದಯಾತ್ರೆಗೆ ಹೆದರಿ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದಾರೆ ಎಂದಿದ್ದಾರೆ. ಈ ಮಧ್ಯೆ, ಸತತ ಚುನಾವಣಾ ಸೋಲಿನಿಂದ ಕಂಗೆಟ್ಟಿರುವ ಶ್ರೀರಾಮುಲು ಕಂಪ್ಲಿ ಅಥವಾ ಮಸ್ಕಿ ಹಾಗೂ ತಮ್ಮ ಸೋದರಳಿಯ ಸುರೇಶ್‌ಬಾಬು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ.
