CrimeLatestLeading NewsMain PostNational

ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

ನವದೆಹಲಿ: ಸಿನಿಮಾ (Cinema) ಜಗತ್ತು ಮಾಯಾವಿ ಇದ್ದಂತೆ, ಅದರಲ್ಲೂ ವಿದೇಶ ಸಿನಿಮಾಗಳು ಹೆಚ್ಚಾಗಿ ಅಪರಾಧ (Crime) ಕೃತ್ಯಗಳ ಆಧಾರಿವೇ ಆಗಿರುತ್ತವೆ. ಆದರೆ ಸಿನಿಮಾದ ಕೆಲವು ಥ್ರಿಲ್ಲರ್ ಸನ್ನಿವೇಶಗಳು ನೋಡುಗರ ಮೇಲೆ ಪ್ರಭಾವ ಬೀರುತ್ತವೆ. ದೆಹಲಿಯಲ್ಲಿ ನಡೆದಿರುವ ಕೊಲೆಗೂ ಅಂತಹದ್ದೇ ಸಿನಿಮಾವೊಂದು ಸ್ಫೂರ್ತಿಯಾಗಿದೆ ಅನ್ನೋದು ತನಿಖಾಧಿಕಾರಿಗಳಿಂದ (Police Investigation Officer) ತಿಳಿದುಬಂದಿದೆ.

ಹೌದು. ಅಮೆರಿಕದಲ್ಲಿ ತೆರೆಕಂಡಿದ್ದ ಕಾಲ್ಪನಿಕ ಕಥೆಗಳ ಆಧರಿತ ಸಿನಿಮಾ `ಡೆಕ್ಸ್ಟರ್‌’ (Dexter Movie) ಭಾರೀ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ನಾಯಕ ವಿಧಿವಿಜ್ಞಾನ (Forensics Expert) ತಜ್ಞನಾಗಿರುತ್ತಾನೆ. ಚಾಣಾಕ್ಷನಾಗಿ ಸರಣಿ ಕೊಲೆಗಳನ್ನು ಮಾಡುತ್ತಾ, ಮತ್ತೊಂದೆಡೆ ಸಾಮಾನ್ಯನಾಗಿ ಜೀವನ ನಡೆಸುತ್ತಿರುತ್ತಾನೆ. ದೆಹಲಿಯ ಕೊಲೆ ಕೇಸ್‌ನಲ್ಲೂ ಇದೇ ರೀತಿಯಾಗಿದೆ. ಆರೋಪಿ ಅಫ್ತಾಬ್ ಬಾಣಸಿಗನಾಗಿದ್ದರಿಂದ ಮಾಂಸ ಕತ್ತರಿಸುವ ಕತ್ತಿ ಬಳಸುವಲ್ಲಿ ನಿಪುಣನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!

ದುರ್ವಾಸನೆ ತೆಡೆಯಲು ಅಗರಬತ್ತಿ ಹಚ್ಚುತ್ತಿದ್ದ: ಘಟನೆ ಬಳಿಕ ಮೈ ಜುಮ್ಮೆನ್ನಿಸುವ ಅನೇಕ ರೋಚಕ ಸತ್ಯಗಳು ಬೆಳಕಿಗೆ ಬರುತ್ತಿವೆ. ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ, ತನ್ನ ಗೆಳತಿಯನ್ನು ಕೊಂದ ಬಳಿಕ ಆಕೆಯ ದೇಹದ ದುರ್ವಾಸನೆ ಹೊರಗೆ ಬಾರದಂತೆ ತಡೆಯಲು ಯಾವಾಗಲೂ ಅಗರಬತ್ತಿ (ಗಂಧದಕಡ್ಡಿ) ಹಚ್ಚಿಡುತ್ತಿದ್ದ. ಆಕೆಯ ದೇಹವನ್ನು 35 ಪೀಸ್‌ಗಳಾಗಿ ಕತ್ತರಿ, ಅದನ್ನಿಡಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದ. ಮುಖ್ಯವಾಗಿ ಕೊಲೆ ಮಾಡಲು ಇದೇ ರೀತಿ ಕೃತ್ಯಗಳನ್ನು ಎಸಗುವ ಅಮೆರಿಕದ ಡೆಕ್ಸ್ಟರ್‌ ಸಿನಿಮಾ ನೋಡಿ ಪ್ರೇರಣೆಗೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಬೈದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live in Relationship) ಗೆಳತಿಯ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ (FIR) ದಾಖಲಿಸಲಾಗಿದ್ದು, ಐದು ದಿನ ಪೊಲೀಸ್ (Police) ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆ ಆರೋಪಿ ವಿವಿಧ ಕಾಡುಗಳಲ್ಲಿ ಹೂತಿಟ್ಟಿದ್ದ ದೇಹದ ಕೆಲ ಭಾಗಗಳನ್ನು ಸಂಗ್ರಹಿಸಿದ್ದಾರೆ. ಆದರೆ ಅವು ಇದೇ ಯುವತಿಯ ದೇಹದ ಭಾಗವೆಂದು ಖಚಿತವಾಗಿ ಹೇಳಿಲ್ಲ. ಕೊಲೆಗೆ ಬಳಸಿದ್ದ ಕತ್ತಿ ಸಹ ಇನ್ನೂ ಪತ್ತೆಯಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

Live Tv

Leave a Reply

Your email address will not be published. Required fields are marked *

Back to top button