CrimeLatestMain PostNational

ಪ್ಲೇಟ್‍ನಲ್ಲಿದ್ದ ಮೊಮೊಸ್ ಬೀಳಿಸಿದ್ದಕ್ಕೆ ನಡೀತು ವ್ಯಕ್ತಿ ಬರ್ಬರ ಹತ್ಯೆ

ನವದೆಹಲಿ: ಪ್ಲೇಟ್‍ನಲ್ಲಿ ಮೊಮೊಸ್ ಅನ್ನು ನೆಲದ ಮೇಲೆ ಬೀಳಿಸಿದ್ದಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ತೆಗೈದಿರುವ ಘಟನೆ ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.

CRIME 2

ಮೃತವ್ಯಕ್ತಿಯನ್ನು ಜೀತೇಂದ್ರ ಎಂದು ಗುರುತಿಸಲಾಗಿದ್ದು, ಜೀತೇಂದ್ರ ಅವರ ಕುತ್ತಿಗೆಗೆ ನಕುಲ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ನಂತರ ಜೀತೇಂದ್ರ ಅವರನ್ನು ಸಮೀಪದಲ್ಲಿರುವ ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಗಿತ್ತು. ಆದರೆ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡೋ ಟಿಕೆ ಹಳ್ಳಿ ಪಂಪ್‌ ಸ್ಟೇಷನ್‌ ಮುಳುಗಡೆ

ಘಟನೆ ಕುರಿತಂತೆ ತನಿಖೆ ವೇಳೆ ಮೃತ ವ್ಯಕ್ತಿ ಜೀತೇಂದ್ರ ಮೇಸ್ತ್ರಿ ಕೆಲಸಗಾರರಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ತಿರಂಗಾ ಚೌಕ್ ಬಳಿ ವಾಸಿಸುತ್ತಿದ್ದರು. ಶನಿವಾರ ರಾತ್ರಿ ತಮ್ಮ ಸ್ನೇಹಿತ ವೀರೇಂದ್ರನನ್ನು ಭೇಟಿಯಾಗಲು ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ಮಾರುಕಟ್ಟೆಗೆ ಬಂದಿದ್ದ ನಕುಲ್ ಮೊಮೊಸ್ ಖರೀದಿಸಿ ತಿನ್ನಲು ಆರಂಭಿಸಿದ್ದನು. ಆಗ ಸ್ಥಳದಲ್ಲಿಯೇ ನಿಂತಿದ್ದ ಜೀತೇಂದ್ರ ಅವರು ಆಕಸ್ಮಿಕವಾಗಿ ನಕುಲ್ ಅನ್ನು ತಳ್ಳಿದ್ದಾರೆ. ಈ ವೇಳೆ ಪ್ಲೇಟ್‍ನಲ್ಲಿದ್ದ ಮೊಮೊಸ್ ನೆಲದ ಮೇಲೆ ಬಿದ್ದಿದೆ. ಇದನ್ನೂ ಓದಿ: ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು – ಕುಡಿದು ಮೈಮರೆತು ಪೊಲೀಸರ ಕೈಗೆ ಸಿಕ್ಕಿಬಿದ್ರು

ಇದರಿಂದ ರೊಚ್ಚಿಗೆದ್ದ ನಕುಲ್ ಜೀತೇಂದ್ರ ಅವರನ್ನು ನಿಂದಿಸಲು ಆರಂಭಿಸಿದ್ದಾನೆ. ಇದನ್ನು ವಿರೋಧಿಸಿ ಅವರು ತಿರುಗಿ ಬಿದ್ದಾಗ ಆರೋಪಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಜೀತೇಂದ್ರ ಅವರ ಕುತ್ತಿಗೆಗೆ ಇರಿದಿದ್ದಾನೆ. ಇದೀಗ ಆರೋಪಿ ನಕುಲ್ ಅನ್ನು ಪೊಲೀಸರು ಬಂಧಿಸಿ, ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Live Tv

Leave a Reply

Your email address will not be published.

Back to top button