– ಪಂಜಾಬ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ
ನವದೆಹಲಿ: ದೆಹಲಿ ಕ್ಯಾಪಿಟಲ್ಸ್ (Delhi Capitals) ಬೌಲರ್ ಲುಂಗಿ ಎನ್‌ಗಿಡಿ (Lungi Ngidi) ಫೀಲ್ಡಿಂಗ್ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದು ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
ಕ್ಯಾಚ್ ಹಿಡಿಯಲು ಮುಂದಾಗಿ ಲುಂಗಿ ಕೆಳಗೆ ಬಿದ್ದು, ತಲೆಗೆ ತೀವ್ರ ಪೆಟ್ಟು ಮಾಡಿಕೊಂಡರು. ಕೆಳಗೆ ಬಿದ್ದ ಬೌಲರ್ ಮೇಲೇಳಲೇ ಇಲ್ಲ. ತಕ್ಷಣ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿತು. ಅವರ ಬೆನ್ನಲ್ಲೇ ಅಂಬುಲೆನ್ಸ್ ಮೈದಾನಕ್ಕೆ ಪ್ರವೇಶಿಸಿತು. ಆಟಗಾರನನ್ನು ಸ್ಟ್ರೆಚರ್ ಮೂಲಕ ಹೊರಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: IPLನಲ್ಲಿ ಇತಿಹಾಸ ಬರೆದ ಕನ್ನಡಿಗ ಕೆ.ಎಲ್.ರಾಹುಲ್; 150 ರನ್ ಗಳಿಸಿದ ಮೊದಲ ಭಾರತೀಯ – ಅಭಿಷೇಕ್ ದಾಖಲೆ ಉಡೀಸ್
ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 265 ರನ್‌ಗಳ ಬೃಹತ್ ಗುರಿ ನೀಡಿದೆ. ಟಾರ್ಗೆಟ್ ಬೆನ್ನತ್ತಿರುವ ಪ್ರಭುಸಿಮ್ರಾನ್ ಮತ್ತು ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದಾರೆ. ಓಪನರ್‌ಗಳು ಪವರ್ ಪ್ಲೇ ಹೊತ್ತಿಗೆ ಸ್ಫೋಟಕ ಸಿಕ್ಸರ್, ಫೋರ್‌ಗಳ ಮೂಲಕಶತಕದ ಗಡಿ ದಾಟಿ ಮುನ್ನುಗ್ಗಿದ್ದಾರೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. ಕೆಎಲ್ ರಾಹುಲ್ ಅಜೇಯ 152 ರನ್ ಬಾರಿಸಿದರು. ರಾಹುಲ್ 67 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ 152 ರನ್ ಗಳಿಸಿದರು. ನಿತೀಶ್ ರಾಣಾ 44 ಎಸೆತಗಳಲ್ಲಿ 91 ರನ್ ಗಳಿಸಿ ಡಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಈ ಜೋಡಿ ಎರಡನೇ ವಿಕೆಟ್‌ಗೆ 95 ಎಸೆತಗಳಲ್ಲಿ 220 ರನ್‌ಗಳ ಜೊತೆಯಾಟವನ್ನು ಕಟ್ಟಿಕೊಟ್ಟಿತು. ರಾಹುಲ್ ಗಳಿಸಿದ 152 ರನ್‌ಗಳು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಇದನ್ನೂ ಓದಿ: ಪ್ರಾಕ್ಟೀಸ್ ವೇಳೆ ಚೆಂಡು ಬಡಿದು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ ಗಂಭೀರ ಗಾಯ – ಆಸ್ಪತ್ರೆಗೆ ರವಾನೆ



