Connect with us

Bollywood

ಮದ್ವೆ ಫೋಟೋ ಲೀಕ್ ಆಗೋದನ್ನು ತಡೆದಿದ್ದೇಗೆ ದೀಪ್‍ವೀರ್?

Published

on

ಮುಂಬೈ: ಬುಧವಾರ ಸಿಂಧ್ ಸಮುದಾಯದಂತೆ ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಸಪ್ತಪದಿ ತುಳಿದಿದ್ದಾರೆ. ಇಂದು ಕೊಂಕಣಿ ಸಂಪ್ರದಾಯದಂತೆ ಮತ್ತೊಮ್ಮೆ ಈ ಜೋಡಿ ಮದುವೆ ಆಗಿದೆ. ಆದರೆ ಇದೂವರೆಗು ನವದಂಪತಿಯ ಫೋಟೋಗಳು ಮಾತ್ರ ಹೊರಬಂದಿಲ್ಲ. ಫೋಟೋ ಲೀಕ್ ಆಗೋದನ್ನು ತಡೆಯಲು ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಇಟಲಿಯ ಕೋಮೊ ಸಿಟಿಯಲ್ಲಿ ಮದುವೆ ಸಿದ್ಧತೆ ಮಾಡಿಕೊಂಡಿದ್ದ ಜೋಡಿ ಸೆಕ್ಯೂರಿಟಿಗಾಗಿ ಬರೋಬ್ಬರಿ 1 ಕೋಟಿ ರೂ. ಪಾವತಿಸಿದ್ದಾರೆ. ಮದುವೆಗೆ ಎರಡು ಕುಟುಂಬಗಳ ಆಪ್ತರು ಸೇರಿದಂತೆ ಹಲವು ಬಾಲಿವುಡ್ ತಾರೆಗಳು ಭಾಗಿಯಾಗಿದ್ದಾರೆ. ಮದುವೆ ಬರುವ ಅತಿಥಿಗಳಿಗೆ ಮೊಬೈಲ್ ತರಕೂಡದು ಎಂದು ಡೀಪ್‍ವೀರ್ ಹೇಳಿದ್ದರಂತೆ. ಅದ್ಯಾಗೊ ಕೆಲವರು ಮೊಬೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳೊಲು ಮುಂದಾದಾಗ ಸೆಕ್ಯೂರಿಟಿ ಅವರನ್ನು ತಡೆದಿದ್ದಾರಂತೆ.

ಇಷ್ಟಾದರೂ ಕೆಲ ಫೋಟೋಗಳು ಲೀಕ್ ಆಗಿದೆ. ಅದರೆ ನವದಂಪತಿ ಫೋಟೋ ಮಾತ್ರ ರಿವೀಲ್ ಆಗಿಲ್ಲ. ಇಂದು ಸಂಜೆ ಸ್ವತಃ ದೀಪಿಕಾ ಮತ್ತು ರಣ್‍ವೀರ್ ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ನವದಂಪತಿಯ ಫೋಟೋ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಅಸ್ಥಿ ಪಂಜರದ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಕೇಂದ್ರ ಸಚಿವೆ ಸ್ಮೃತಿಇರಾನಿ, “ನೀವು ತುಂಬಾ ದಿನಗಳಿಂದ ಡೀಪ್‍ವೀರ್ ಮದುವೆ ಫೋಟೋ ನೋಡಲು ಕಾಯುತ್ತಿರುವ ಹಾಗಿದೆ” ಎಂದು ಫನ್ನಿ ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಬ್ಬ ಸಾಮಾನ್ಯ ಅಭಿಮಾನಿಯ ರೀತಿಯಲ್ಲಿ ಸ್ಮೃತಿ ಇರಾನಿ ಅವರು ಫೋಟೋ ನೋಡಲು ಕಾಯುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *

www.publictv.in