– ಅದು ರಾಜ್ಯದ ಸಮಸ್ಯೆ ಏನಲ್ಲ, ನಮ್ಮ ನಮ್ಮ ಸಮಸ್ಯೆ ಎಂದ ಸಚಿವ ಜಾರಕಿಹೊಳಿ
ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಡುವೆ ಭಿನ್ನಾಭಿಪ್ರಾಯ ಚರ್ಚೆ ಜೋರಾಗಿದೆ. ಈ ಬಗ್ಗೆ ಮಾತನಾಡಿರುವ ಜಾರಕಿಹೊಳಿ, ಅದು ರಾಜ್ಯದ ಸಮಸ್ಯೆ ಅಲ್ಲ. ನಮ್ಮ ನಮ್ಮ ಸಮಸ್ಯೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ (Siddaramaiah) ಹಾಗೂ ತಮ್ಮ ನಡುವೆ ಅಸಮಾಧಾನ ವಿಚಾರ ಬಗ್ಗೆ ಕೇಳಿದಾಗ ಅದು ರಾಜ್ಯದ ಸಮಸ್ಯೆ ಏನಲ್ಲ. ಅದು ನಮ್ಮ ನಮ್ಮ ಸಮಸ್ಯೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಇದನ್ನೂ ಓದಿ: CWMA ಸಭೆ ಬಳಿಕ ನಾಲೆಗಳಿಗೆ ನೀರು; ಈ ವಿಚಾರದಲ್ಲಿ ರಾಜಕೀಯ ಬೇಡ: ಚಲುವರಾಯಸ್ವಾಮಿ
ಆರ್‌ಎಸ್‌ಎಸ್ ನೋಂದಣಿಯು ಗೃಹ ಸಚಿವರಿಗೆ ಸಂಬಂಧಿಸಿದ ವಿಚಾರವಾಗಿದೆ. ಅಹಿಂದ ಸಂಘಟನೆ ನೋಂದಣಿ ಆಗಿದೆ. ಯಾವುದೋ ಹೆಸರಲ್ಲಿ ಈ ಹಿಂದೆ ನೋಂದಣಿ ಆಗಿದೆ. ಆರ್‌ಎಸ್‌ಎಸ್ ನೋಂದಣಿ ಬಗ್ಗೆ ಗೃಹ ಸಚಿವರು ಈಗಾಗಲೇ ಮಾತಾಡಿದ್ದಾರೆ. ಅದು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ವಿಚಾರ ಅಲ್ಲ ಎಂದರು.
ಬಿಡದಿ ಟೌನಶಿಪ್‌ನಲ್ಲಿ ರೈತರ ಜಮೀನನ್ನ ಒತ್ತಾಯ ಪೂರ್ವಕವಾಗಿ ತಗೊಳ್ತಿಲ್ಲ. ಸ್ವಯಂಪ್ರೇರಿತವಾಗಿ ಯಾರು ಕೊಡುತ್ತಿದ್ದಾರೋ ಅವರ ಜಮೀನು ತಗೊಳ್ತಿದಾರೆ. ನಿನ್ನೆ ಕೂಡಾ ಜಮೀನು ಕೊಟ್ಟವರದ್ದು ಸರ್ವೆ ಮಾಡೋಕೆ ಅಧಿಕಾರಿಗಳು ಹೋಗಿದ್ರು. ಕೊಡಲ್ಲ ಅಂದರೆ ಕೊಡಲ್ಲ ಅಷ್ಟೆ. ಯಾರು ಕೊಡ್ತಾರೆ ಅವರದ್ದು ತಗೊಂಡಿದ್ದಾರೆ ಎಂದು ಜಾರಕಿಹೊಳಿ ಹೇಳಿದರು. ಇದನ್ನೂ ಓದಿ: ರಾಜಕೀಯ ಬೇರೆ, ಕೆಲಸ ಬೇರೆ – ಕೃಷ್ಣ ಬೈರೇಗೌಡ ಕಾರ್ಯವೈಖರಿಗೆ ಹೆಚ್‌ಡಿಡಿ ಶ್ಲಾಘನೆ
