ಇಸ್ಲಾಮಾಬಾದ್: ಪಿಒಕೆಯಲ್ಲಿ (Pakistan-occupied Kashmir) ಘರ್ಷಣೆ ವೇಳೆ ಪಾಕಿಸ್ತಾನ ಪಡೆಗಳು (Pakistan Forces) ನಡೆಸಿದ ಗುಂಡಿನ ದಾಳಿಯಿಂದ 6 ನಾಗರಿಕರು ಸಾವನ್ನಪ್ಪಿದ್ದಾರೆ.
ಪಾಕಿಸ್ತಾನಿ ಭದ್ರತಾ ಪಡೆಗಳು ರಾವಲಕೋಟ್‌ನಲ್ಲಿ ನಾಗರಿಕರ ಮೇಲೆ ದಮನಕಾರಿ ಕಾರ್ಯಾಚರಣೆ ನಡೆಸಿದ ನಂತರ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಂದು ಹಿಂಸಾತ್ಮಕ ಭುಗಿಲೆದ್ದಿತು. ಇದು ನಗರದ ಹೊಸ ಬಸ್ ಟರ್ಮಿನಲ್ ಬಳಿ ಘರ್ಷಣೆಗೆ ಕಾರಣವಾಯಿತು. ಘರ್ಷಣೆಯ ಸಮಯದಲ್ಲಿ ಪಾಕ್ ಪಡೆಗಳು ಗುಂಡು ಹಾರಿಸಿದಾಗ ಆರು ನಾಗರಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: 2 ಯುಎಇ ಟ್ಯಾಂಕರ್ ಮೇಲೆ ಇರಾನ್ ದಾಳಿ – ಓರ್ವ ಭಾರತೀಯ ಸಾವು, 6 ಮಂದಿಗೆ ಗಾಯ
ಜಾಹಿದ್ ಮುಘಲ್, ಜಾಫರ್ ಮುಘಲ್, ಅರ್ಸಲಾನ್ ಅಕ್ಬರ್ ಮತ್ತು ರಾವಲ್ಕೋಟ್‌ನ ಮಟಿಯಲ್ ಮೀರಾ ಬಸ್ ಟರ್ಮಿನಲ್‌ನಲ್ಲಿ ಕೊಲ್ಲಲ್ಪಟ್ಟ ವಾಜಿದ್ ಹಯಾತ್ ಸಾವಿಗೀಡಾಗಿದ್ದಾರೆ. ಇತ್ತೀಚಿನ ಹಿಂಸಾಚಾರವು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಥಳೀಯ ನಾಗರಿಕರು ಪಾಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಾಗರಿಕರ ಹತ್ಯೆಗೂ ಮುನ್ನ ಅಮೆರಿಕದಲ್ಲಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸಮುದಾಯದ ಸದಸ್ಯರು ವಾಷಿಂಗ್ಟನ್‌ನ ಶ್ವೇತಭವನದ ಹೊರಗೆ ಜಮಾಯಿಸಿ, ಈ ಪ್ರದೇಶದಲ್ಲಿ ಕ್ಷೀಣಿಸುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಅಂತರರಾಷ್ಟ್ರೀಯ ಗಮನ ಹರಿಸಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಕಚ್ಚಾ ತೈಲ ದರ ಸಮರ – ಸೌದಿಯಿಂದ ಭಾರೀ ಕಡಿತ, ಭಾರತಕ್ಕೆ ಏನು ಲಾಭ?
ಮಹಿಳೆಯರು, ಮಕ್ಕಳು ಮತ್ತು ಸಮುದಾಯದ ಮುಖಂಡರು ಸೇರಿದಂತೆ ಸುಮಾರು 100 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ ನಾಗರಿಕ ಪ್ರದೇಶಗಳಿಂದ ಪಾಕಿಸ್ತಾನಿ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
