Connect with us

Bollywood

ಕಿಕ್-2ದಲ್ಲಿ ಸಲ್ಲು ಜೊತೆ ದೀಪಿಕಾ ನಟಿಸ್ತಾರಾ? ದೀಪಿಕಾ ಮ್ಯಾನೇಜರ್ ಹೇಳಿದ್ದು ಹೀಗೆ

Published

on

ಮುಂಬೈ: ಸಲ್ಮಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಇದುವರೆಗೂ ಯಾವುದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿಲ್ಲ. ಕಿಕ್-2 ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತಿತ್ತು. ಆದರೆ ಈ ಸುದ್ದಿಗೆ ಈಗ ಬ್ರೇಕ್ ಬಿದ್ದಿದೆ.

ಕಿಕ್-2 ಚಿತ್ರಕ್ಕೆ ದೀಪಿಕಾ ಅವರನ್ನು ಯಾರೂ ಅಪ್ರೋಚ್ ಮಾಡಿಲ್ಲ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಇದೇನು ಮೊದಲ ಬಾರಿ ಆಗಿಲ್ಲ, 7ನೇ ಬಾರಿ ಈ ತರಹ ಆಗಿದೆ. ಸಲ್ಮಾನ್ ಮತ್ತು ದೀಪಿಕಾ ಸೇರುವ ಮೊದಲೇ ಅವರ ಡೇಟ್ಸ್ ಅಥವಾ ಚಿತ್ರದ ಕಥೆ ಅವರನ್ನು ತಡೆಯುತ್ತಿದೆ ಎಂದು ದೀಪಿಕಾ ಅವರ ಮ್ಯಾನೇಜರ್ ಹೇಳಿದ್ದಾರೆ.

ಸಲ್ಮಾನ್ ಜೊತೆ ನಟಿಸಲು ಇಚ್ಛಿಸದ ಒಬ್ಬರನ್ನು ತೋರಿಸಿ. ನಾನು ಸಲ್ಮಾನ್ ಜೊತೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ಅಭಿನಯಿಸಲು ಇಷ್ಟ ಪಡುತ್ತೇನೆ. ಅವರು ಆನ್ ಸ್ಕ್ರೀನ್ ತುಂಬಾ ರೊಮ್ಯಾಂಟಿಕ್ ಆಗಿ ಕಾಣುತ್ತಾರೆ ಎಂದು ದೀಪಿಕಾ ಹೇಳಿದ್ದರು.

ಕಿಕ್-2ನಲ್ಲಿ ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳಲಿದ್ದು, ಇದೂವರೆಗೂ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ನೀಡುತ್ತಿಲ್ಲ. ಕಿಕ್ ಮೊದಲನೇ ಭಾಗವು ತುಂಬಾ ಚೆನ್ನಾಗಿ ಮೂಡಿ ಬಂದಿತ್ತು. ಕಿಕ್-2 ಚಿತ್ರಕ್ಕಾಗಿ ಒಳ್ಳೆಯ ಚಿತ್ರಕಥೆಯನ್ನು ತಯಾರಿಸುತ್ತಿದ್ದೇನೆ ಎಂದು ನಿರ್ದೇಶಕ ನದಿಯಾವಾಲ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in