ನವದೆಹಲಿ: ದೆಹಲಿಯ (Delhi) ಮಹಿಳಾ ಆಯೋಗದ ಅಧ್ಯಕ್ಷೆ (DCW Chief) ಸ್ವಾತಿ ಮಲಿವಾಲ್ (Swati Maliwal) ಅವರನ್ನು ಕಾರು (Car) ಚಾಲಕನೊಬ್ಬ (Driver) 10 ರಿಂದ 15 ಮೀಟರ್ ಧರಧರನೇ ಎಳೆದೊಯ್ದಿರುವ ಘಟನೆ ದೆಹಲಿ ಏಮ್ಸ್ (AIIMS) ಬಳಿ ನಡೆದಿದೆ.
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, ನಿನ್ನೆ ತಡರಾತ್ರಿ ನಾನು ದೆಹಲಿಯಲ್ಲಿ ಮಹಿಳಾ ಭದ್ರತೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೆ. ಈ ವೇಳೆ ಕಾರಿನ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ನನಗೆ ಕಿರುಕುಳ ನೀಡಿದ್ದಾನೆ. ಆಗ ನಾನು ಅವನನ್ನು ಹಿಡಿಯಲು ಯತ್ನಿಸಿದ್ದೇನೆ. ಆಗ ನನ್ನ ಕೈ ಕಾರಿನ ಕನ್ನಡಿಯ ಒಳಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದೇ ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕ ಕಾರು ಚಾಲನೆ ಮಾಡಿಕೊಂಡು ಎಳೆದೊಯ್ದಿದ್ದಾನೆ. ದೇವರು ನನ್ನ ಜೀವ ಉಳಿಸಿದ್ದಾರೆ. ದೆಹಲಿ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ನನಗೆ ಈ ರೀತಿ ಆಗಿದೆ ಎಂದರೆ, ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ ಎಂದಿದ್ದಾರೆ. ಇದನ್ನೂ ಓದಿ: ಸ್ಕೂಟರ್ ಹಿಂದೆ ಧರಧರನೇ ವೃದ್ದನನ್ನ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ
Advertisement
कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए।
— Swati Maliwal (@SwatiJaiHind) January 19, 2023
Advertisement
ಏನಿದು ಘಟನೆ:
ಜ.18ರ ತಡರಾತ್ರಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಸ್ವಾತಿ ಮಲಿವಾಲ್‍ಗೆ ಕಿರುಕುಳ ನೀಡಿದ್ದಾನೆ. ಈ ವೇಳೆ ಸ್ವಾತಿ ಮಲಿವಾಲ್ ಅವನನ್ನು ಹಿಡಿಯಲು ಕಾರಿನ ಒಳಗೆ ಕೈ ಹಾಕಿದಾಗ ಚಾಲಕ ಕಾರಿನ ಕನ್ನಡಿಯನ್ನು ಮೇಲೆ ಮಾಡಿದ್ದೇನೆ. ಈ ವೇಳೆ ಸ್ವಾತಿ ಮಲಿವಾಲ್ ಅವರ ಕೈ ಕಾರಿನ ಒಳಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದೇ ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕ ಕಾರು ಚಾಲನೆ ಮಾಡಿಕೊಂಡು ಎಳೆದೊಯ್ದಿದ್ದಾನೆ. ಆ ಬಳಿಕ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 3 ಪತ್ನಿಯರ ಬಗ್ಗೆ ತಿಳಿದುಕೊಂಡ್ಲು ಅಂತಾ 4ನೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k