ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ (Darshan) ಅತಿದೊಡ್ಡ ಸಂಕಷ್ಟ ಎದುರಾಗಿದೆ. ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ.
ಪ್ರದೋಷ್ ಮಾಫಿ ಸಾಕ್ಷಿಗೆ ಒಪ್ಪಿಗೆ ನೀಡಿ ಸಿಸಿಹೆಚ್ 42 ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ನಿಬಂಧನೆ ಹೇರಿ ಕೋರ್ಟ್ ಅನುಮತಿಸಿದೆ. ಗೊತ್ತಿರುವ ಎಲ್ಲಾ ಸತ್ಯವನ್ನು ಕೋರ್ಟ್ ಮುಂದೆ ಹೇಳಬೇಕು. ಸುಳ್ಳು ನುಡಿದರೆ ಪ್ರಾಸಿಕ್ಯೂಷನ್ ತೀರ್ಮಾನ ತೆಗೆದುಕೊಳ್ಳುವ ಅವಕಾಶ ಇದೆ. ಇದನ್ನೂ ಓದಿ: ದರ್ಶನ್‌ಗೆ ಮಾಫಿ ಸಾಕ್ಷಿ ಸಂಕಷ್ಟ – ದೈವದ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ
ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ಅಪ್ರೂವರ್ ಆಗಿ ಸಾಕ್ಷಿಯಾದ ಹಿನ್ನೆಲೆ ಪ್ರಕರಣದ ಉಳಿದ 16 ಮಂದಿಗೆ ಸಂಕಷ್ಟ ಎದುರಾಗಿದೆ. ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪ್ರದೋಷ್ ಸಾಕ್ಷ್ಯ ನುಡಿಯಲಿದ್ದಾರೆ.
ಟ್ರಯಲ್ ಮುಗಿಯುವವರೆಗೂ ಜೈಲಿನಲ್ಲೇ ಇರಬೇಕು. ಗೊತ್ತಿರುವ ಮಾಹಿತಿಯನ್ನು ಸರಿಯಾಗಿ ತಿಳಿಸಬೇಕು. ಒಂದು ವೇಳೆ ತಪ್ಪು ಹೇಳಿಕೆ ನೀಡಿದ್ರೆ ಮತ್ತೆ ಆರೋಪಿಯಾಗಿ ಪರಿಗಣಿಸೋದಾಗಿ ತಿಳಿಸಿದೆ. ಇದನ್ನೂ ಓದಿ: ದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾ
