ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಆಶ್ವಯುಜ
ಪಕ್ಷ: ಕೃಷ್ಣ
ತಿಥಿ: ತ್ರಯೋದಶೀ
ನಕ್ಷತ್ರ : ಚಿತ್ತಾ
ರಾಹುಕಾಲ: 9 : 13 – 10 : 40
ಗುಳಿಕಕಾಲ: 6 : 18 – 7 : 46
ಯಮಗಂಡಕಾಲ: 1 : 34 – 3 : 01
ಮೇಷ: ದ್ವಂದ್ವ ನಿರ್ಧಾರಗಳಿಂದ ಒದ್ದಾಟ, ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಆದಾಯ, ಪೀತಿ ಪ್ರೇಮದಲ್ಲಿ ಯಶಸ್ಸು.
ವೃಷಭ: ಅನಗತ್ಯ ತಿರುಗಾಟ, ಕುಟುಂಬದಲ್ಲಿ ಸಂತೋಷ, ಆಲಸ್ಯವನ್ನುತ್ಯಜಿಸಬೇಕು.
ಮಿಥುನ: ಹಳೆಯ ಸಾಲ ತೀರಿಸಿಕೊಳ್ಳಬಹುದು, ಆರೋಗ್ಯದ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ.
ಕಟಕ: ಹಿರಿಯರ ವರ್ಚಸ್ಸು ಬಳಸುವಿರಿ, ಇಷ್ಟಾರ್ಥಗಳ ಸಿದ್ಧಿ, ಸಂತಾನ ಯೋಗ.
ಸಿಂಹ: ಸಂಗಾತಿಯಿಂದ ಧನ ಸಹಾಯ, ದುಡುಕು ಮಾತಿನಿಂದ ವೈರತ್ವ, ದಾಯಾದಿಗಳ ಕಲಹ.
ಕನ್ಯಾ: ಹಿತಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ, ವಿವಾಹಕ್ಕೆ ತೊಂದರೆ.
ತುಲಾ: ಗುರಿ ತಲುಪಲು ಹೆಚ್ಚು ಶ್ರಮ ಪಡಬೇಕಾದೀತು. ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ತೊಂದರೆಗಳೇನಿದ್ದರೂ ತಾತ್ಕಾಲಿಕ.
ವೃಶ್ಚಿಕ: ಸಂಗಾತಿಯೊಂದಿಗೆ ಸಣ್ಣ ಪುಟ್ಟ ಮನಸ್ತಾಪ, ವಿಘ್ನಗಳು ದೂರ, ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ.
ಧನಸ್ಸು: ಭೂಮಿಕೊಳ್ಳಲು ಆಸಕ್ತಿ ತೋರುವಿರಿ. ದೈಹಿಕ ಅಸಮರ್ಥತೆ, ಅನಗತ್ಯ ಅಭಿಲಾಷೆಗಳು.
ಮಕರ: ದೂರ ಪ್ರದೇಶಕ್ಕೆ ತೆರಳುವಿರಿ. ಮಕ್ಕಳಿಂದ ಅನುಕೂಲ, ಊಟ ಉಪಚಾರಗಳಲ್ಲಿ ವ್ಯತ್ಯಾಸ.
ಕುಂಭ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ. ಶತ್ರುಕಾಟದಿಂದ ಮುಕ್ತಿ, ಕನಸು ನನಸಾಗುವ ಕಾಲ.
ಮೀನ: ಕೌಟುಂಬಿಕ ಸಮಸ್ಯೆ, ಭಾವನಾತ್ಮಕ ವಿಷಯಗಳಿಂದ ನೋವು, ಸಂಗಾತಿಯಿಂದ ಅನುಕೂಲ.
