Connect with us

Dina Bhavishya

ದಿನಭವಿಷ್ಯ 14-09-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ
ಗುರುವಾರ, ಆರಿದ್ರಾ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
ರಾಹುಕಾಲ: ಮಧ್ಯಾಹ್ನ 1:50 ರಿಂದ 3:22
ಗುಳಿಕಕಾಲ: ಬೆಳಗ್ಗೆ 9:15 ರಿಂದ 10:47
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43

ಮೇಷ: ಬಂಧುಗಳಿಂದ ಸಹಾಯ ಕೇಳುವಿರಿ, ಚರ್ಮ ತುರಿಕೆ, ನರ ದೌರ್ಬಲ್ಯ,ತಲೆ ನೋವು, ತಾಯಿಯ ಆರೋಗ್ಯದಲ್ಲಿ ಏರುಪೇರು, ಸಾಲ ಮಾಡುವ ಪರಿಸ್ಥಿತಿ.

ವೃಷಭ: ಆತ್ಮೀಯರಿಂದ ಹಣ ಸಹಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾರಾಟ ಕ್ಷೇತ್ರದವರಿಗೆ ಅನುಕೂಲ, ಗೌರವಕ್ಕೆ ಧಕ್ಕೆ.

ಮಿಥುನ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಹೆಣ್ಣು ಮಕ್ಕಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ಮಾಟ-ಮಂತ್ರದ ಭೀತಿ.

ಕಟಕ: ಬಂಧುಗಳಿಂದ ಮೋಸ, ಕಾರ್ಯ ಕರ್ತವ್ಯಗಳಲ್ಲಿ ವಿಳಂಬ, ಮಾಡುವ ಕೆಲಸದಲ್ಲಿ ಅಡೆತಡೆ, ಸರ್ಕಾರಿ ಕಾರ್ಯದಲ್ಲಿ ಜಯ.

ಸಿಂಹ: ಅನಗತ್ಯ ಖರ್ಚಿಗೆ ತಡೆ, ಕುಟುಂಬದಲ್ಲಿ ಆತಂಕ, ರಾಜಕೀಯ ವ್ಯಕ್ತಿಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ,ಸ್ವಯಂಕೃತ ಅಪರಾಧಗಳಿಂದ ನಷ್ಟ,ಅವಕಾಶ ಕೈ ತಪ್ಪುವುದು,ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಸ್ತ್ರೀಯರಿಂದ ಕಿರಿಕಿರಿ, ತಂದೆಯಿಂದ ತೊಂದನೆ, ಆಕಸ್ಮಿಕ ಕಲಹ ನಷ್ಟ ಸಾಧ್ಯತೆ.

ವೃಶ್ಚಿಕ: ಕಮಿಷನ್ ಏಜೆಂಟ್‍ಗಳಿಗೆ ಲಾಭ, ಚೀಟಿ ವ್ಯವಹಾರದಲ್ಲಿ ಅನುಕೂಲ, ಕಾನೂನು ಬಾಹಿರ ಹಣ ಸಂಪಾದನೆ, ಮೇಲಾಧಿಕಾರಿಗಳಿಂದ ತೊಂದರೆ, ಆತುರ ಸ್ವಭಾವ, ಅಹಂಭಾವದಿಂದ ದಾಂಪತ್ಯದಲ್ಲಿ ಕಲಹ.

ಧನಸ್ಸು: ಸಂಗಾತಿಯಿಂದ ಆಕಸ್ಮಿಕ ಲಾಭ, ಸ್ನೇಹಿತರು ಶತ್ರುಗಳಾಗುವರು, ಸಣ್ಣ ತಪ್ಪುಗಳಿಂದ ಸಂಕಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ.

ಮಕರ: ತಂದೆ-ಸ್ನೇಹಿತರಿಂದ ಸಾಲ ಕೇಳುವಿರಿ, ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಶತ್ರುತ್ವ ಹೆಚ್ಚಾಗುವುದು.

ಕುಂಭ: ಮಕ್ಕಳಿಗಾಗಿ ಸಾಲ ಮಾಡುವಿರಿ, ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಕಲ್ಪನಾ ಲೋಕದಲ್ಲಿ ವಿಹಾರ, ಆಕಸ್ಮಿಕ ತೊಂದರೆ ಎದುರಾಗುವುದು.

ಮೀನ: ದಾಂಪತ್ಯದಲ್ಲಿ ಕಲಹ, ಸ್ನೇಹಿತರ ನಡುವೆ ಸಂಶಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನಗತ್ಯ ಸಂಕಷ್ಟಕ್ಕೆ ಸಿಲುಕುವಿರಿ.

Click to comment

Leave a Reply

Your email address will not be published. Required fields are marked *

www.publictv.in