ಯಾದಗಿರಿ: ಮೀನುಗಾರನೊಬ್ಬ ಮೊಸಳೆ ಬಾಯಿಗೆ ಸಿಲುಕಿ ಪಾರಾದ ಘಟನೆ ಯಾದಗಿರಿ ಜಿಲ್ಲೆಯ ಯಮನೂರಿನಲ್ಲಿ ನಡೆದಿದೆ.
ಜಟ್ಟೆಪ್ಪ ನಾಗಪ್ಪ (40) ಕೃಷ್ಣಾ ನದಿಯಲ್ಲಿ ಮೊಸಳೆಯೊಂದಿಗೆ ಸೆಣಸಾಡಿದ ಮೀನುಗಾರ. ನಾಗಪ್ಪ ಬೆಳಗ್ಗೆ ಕೃಷ್ಣಾ ನದಿಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ದಡದ ಸಮೀಪವಿದ್ದ ಮೊಸಳೆಯೊಂದು ನಾಗಪ್ಪ ಎಡಗಾಲನ್ನು ಕಚ್ಚಿ ಹಿಡಿಯಿತು. ಇದಕ್ಕೆ ದೃತಿಗೆಡದ ಜಟೆಪ್ಪ, ಭಾರೀ ಸಾಹಸದಿಂದ ಅದರ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ.
Advertisement
Advertisement
ತೀವ್ರವಾಗಿ ಗಾಯಗೊಂಡ ನಾಗಪ್ಪ ಅವರನ್ನು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಕಾಲಿಗೆ 16 ಹೊಲಿಗೆ ಹಾಕಲಾಗಿದೆ. ಇನ್ನೂ ಇತ್ತೀಚೆಗೆ ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
Advertisement
ನದಿಗಿಳಿಯುವ ಮೀನುಗಾರು, ನದಿ ದಾಟುವವರ ಮೇಲೆ ಮೊಸಳೆಗಳು ದಾಳಿ ನಡೆಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.