ಬೆಂಗಳೂರು: ವಿಧಾನ ಪರಿಷತ್ 6ನೇ ದಿನ ಕಲಾಪವೂ ಸಚಿವ ನಾಗೇಂದ್ರ (Nagendra) ರಾಜೀನಾಮೆ ಒತ್ತಾಯಿಸಿ ಬಲಿಯಾಯ್ತು. ಸದನ ಪ್ರಾರಂಭ ಆದ ಕೂಡಲೇ ವಿಪಕ್ಷಗಳು ನಾಗೇಂದ್ರ ವಜಾ ಮಾಡುವಂತೆ ಘೋಷಣೆ ಕೂಗಿದರು.
ಸಭಾಪತಿಗಳು ಮನವಿ ಮಾಡಿದ್ರು ಕ್ಯಾರೇ ಎನ್ನಲಿಲ್ಲ. ಈ ವೇಳೆ ಕಾಂಗ್ರೆಸ್ (Congress) ಸದಸ್ಯರಾದ ಐವಾನ್ ಡಿಸೋಜ, ಹರಿಪ್ರಸಾದ್ ಗಲಾಟೆ ಮಾಡೋ ಸದಸ್ಯರನ್ನ ಹೊರಗೆ ಹಾಕಿ ಅಂತ ಮನವಿ ಮಾಡಿದರು. ಸಭಾ ನಾಯಕ ಯತೀಂದ್ರ ಕೂಡಾ ವಿಪಕ್ಷಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಕ್ಯಾರೇ ಎನ್ನದ ವಿಪಕ್ಷಗಳು ಘೋಷಣೆ ಮುಂದುವರೆಸಿದರು. ಇದನ್ನೂ ಓದಿ: ನಾಗೇಂದ್ರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲಿ: ಪ್ರಿಯಾಂಕ್ ಖರ್ಗೆ
ಸರ್ಕಾರದ ವಿರುದ್ದ ಹಾಡು ಹೇಳಿ ಘೋಷಣೆ ಕೂಗಿದರು. ವಿಪಕ್ಷಗಳ ಗಲಾಟೆ ನಡುವೆ ಸಭಾಪತಿಗಳು ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಕಲಾಪ, ಗಮನ ಸೆಳೆಯುವ ಸೂಚನೆ ಕಲಾಪ ನಡೆಸಿದರು. ವಿಪಕ್ಷಗಳು ಯಾವುದೇ ಕಲಾಪದಲ್ಲಿ ಭಾಗಿಯಾಗದೇ ಘೋಷಣೆ ಕೂಗಿದರು.
ಗಲಾಟೆ ಮಧ್ಯೆ ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2026 ಅಂಗೀಕಾರವಾಯ್ತು. ಬಳಿಕ ಕಲಾಪವನ್ನು ಸಭಾಪತಿಗಳು ಮಧ್ಯಾಹ್ನಕ್ಕೆ ಮುಂದೂಡಿಕೆ ಮಾಡಿದರು. ಇದನ್ನೂ ಓದಿ: “ದಲಿತರ 187 ಕೋಟಿ ಹಣವನ್ನು ನುಂಗಿದ ನಾಗೇಂದ್ರ ರಾಜೀನಾಮೆ ನೀಡಲೇಬೇಕು” – ವಿಧಾನಸೌಧ ಮುತ್ತಿಗೆ, ಬಿಜೆಪಿ ನಾಯಕರು ವಶ
