ಬೆಂಗಳೂರು: 2023ರ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) 40 ಸೀಟು ಮೇಲೆ ಒಂದೇ ಒಂದು ಸೀಟು ಗೆಲ್ಲುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಭವಿಷ್ಯ ನುಡಿದಿದ್ದಾರೆ.
Advertisement
ಇಂದಿನಿಂದ ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಬೆಳಗಾವಿಯಿಂದ ಪ್ರಾರಂಭ ಆಗುತ್ತಿರೋದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ವ್ಯರ್ಥ ಕಸರತ್ತು ಮಾಡ್ತಿದ್ದಾರೆ. ಅವರ ಪ್ರಮುಖ ನಾಯಕ ರಾಹುಲ್ ಗಾಂಧಿಯವರೇ (Rahul Gandhi) ಸ್ವತಃ ಕ್ಷೇತ್ರದಲ್ಲಿ ಸೋತು. ಕೇರಳಕ್ಕೆ ಓಡಿ ಹೋಗಿ ನಿಂತಿದ್ದಾರೆ. ಮೈಸೂರಿನಲ್ಲಿ ಬೆಳೆದ ಸಿದ್ದರಾಮಯ್ಯ (Siddaramaiah) ಅವರು ಬಾದಾಮಿಯಲ್ಲಿ ನಿಂತು ಕಡಿಮೆ ಅಂತರದಲ್ಲಿ ಗೆದ್ದಿದ್ದರು. ಈಗ ಬಾದಾಮಿಯಿಂದ ಪಲಾಯನ ಮಾಡಿ ಕೋಲಾರಕ್ಕೆ ಹೋಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಬದಲಾವಣೆಗೆ ಇಂದು ನಾಂದಿ ಹಾಡುತ್ತಿದ್ದೇವೆ: ಡಿಕೆಶಿ
Advertisement
Advertisement
ಕಾಂಗ್ರೆಸ್ ಬಂಡವಾಳ 75 ವರ್ಷ ಆಡಳಿತದಲ್ಲಿ 60 ವರ್ಷ ಕಾಂಗ್ರೆಸ್‍ನವರೇ ಆಳಿದ್ದಾರೆ. 60 ವರ್ಷ ಏನ್ ಮಾಡಿದ್ದಾರೆ ಅಂತ ಮೊದಲು ಅವರು ಜನರಿಗೆ ಹೇಳಲಿ. ಕೆಂಪಣ್ಣನನ್ನು ಮುಂದಿಟ್ಟುಕೊಂಡು ಸುಮ್ಮನೆ ಆರೋಪ ಮಾಡ್ತಿದ್ದಾರೆ. ಜನ ಇದೆಲ್ಲವನ್ನೂ ನಂಬೋದಿಲ್ಲ. ಕಾಂಗ್ರೆಸ್ ಪಕ್ಷ 2023ರ ಚುನಾವಣೆ 40ಕ್ಕಿಂತ ಹೆಚ್ಚು ಸೀಟು ಗೆಲ್ಲೋದಿಲ್ಲ. ಇವತ್ತು ಹೇಳ್ತೀನಿ ಬರೆದಿಟ್ಟುಕೊಳ್ಳಿ. 40 ಸೀಟು ಮೇಲೆ ಒಂದೇ ಒಂದು ಸೀಟು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲೋದಿಲ್ಲ. ಗುಜರಾತ್‍ನಲ್ಲಿ ಬಂದ ಫಲಿತಾಂಶವೇ ರಾಜ್ಯದಲ್ಲಿ ಬರಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಸೋಲು ಖಚಿತ: ಗೋವಿಂದ ಕಾರಜೋಳ ಭವಿಷ್ಯ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k