Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಜೆಪಿ ನಾಯಕರ ‘ನನ್ನನ್ನೂ ಬಂಧಿಸಿ’ ಪೋಸ್ಟರ್‌ ಅಭಿಯಾನಕ್ಕೆ ಕಾಂಗ್ರೆಸ್‌ ಠಕ್ಕರ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಿಜೆಪಿ ನಾಯಕರ ‘ನನ್ನನ್ನೂ ಬಂಧಿಸಿ’ ಪೋಸ್ಟರ್‌ ಅಭಿಯಾನಕ್ಕೆ ಕಾಂಗ್ರೆಸ್‌ ಠಕ್ಕರ್‌

Bengaluru City

ಬಿಜೆಪಿ ನಾಯಕರ ‘ನನ್ನನ್ನೂ ಬಂಧಿಸಿ’ ಪೋಸ್ಟರ್‌ ಅಭಿಯಾನಕ್ಕೆ ಕಾಂಗ್ರೆಸ್‌ ಠಕ್ಕರ್‌

Public TV
Last updated: January 5, 2024 11:42 am
Public TV
Share
3 Min Read
congress tweet
SHARE

ಬೆಂಗಳೂರು: ಶ್ರೀಕಾಂತ್‌ ಪೂಜಾರಿ ಬಂಧನ ಪ್ರಕರಣ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಶ್ರೀಕಾಂತ್‌ ಬಂಧನ ಖಂಡಿಸಿ ಬಿಜೆಪಿ ನಾಯಕರು, ‘ನಾನು ಕರಸೇವಕ.. ನನ್ನನ್ನೂ ಬಂಧಿಸಿ’ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಠಕ್ಕರ್‌ ಕೊಟ್ಟಿದೆ.

,@BJP4Karnataka ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು! @CTRavi_BJP ಅವರೇ, ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ? pic.twitter.com/jn3lQUm2Nn

— Karnataka Congress (@INCKarnataka) January 5, 2024

ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರ ಫೋಟೋಗಳನ್ನು ಎಡಿಟ್‌ ಮಾಡಿ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಕಾಂಗ್ರೆಸ್‌, ಬಿಜೆಪಿ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್‌ ಹೀಗಿರಬೇಕು ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ಕರಸೇವಕರ ಮೇಲೆ ಪ್ರಕರಣಗಳು ಬಾಕಿ ಇವೆ ಎಂದ ಸಿಎಂನ್ನು ಶ್ರೀರಾಮ ಕ್ಷಮಿಸಲ್ಲ: ಅಶೋಕ್ ಕಿಡಿ

,@BJP4Karnataka ಅಧ್ಯಕ್ಷರಾದ @BYVijayendra ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ.

ಬಿಜೆಪಿಗರೆಲ್ಲರೂ “ನನ್ನನ್ನೂ ಬಂಧಿಸಿ“ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? pic.twitter.com/iE4nqOTZrW

— Karnataka Congress (@INCKarnataka) January 5, 2024

‘ನಾನು ಕರಸೇವಕ.. ನನ್ನನ್ನೂ ಬಂಧಿಸಿ’ ಎಂಬ ಪೋಸ್ಟರ್‌ ಹಿಡಿದು ಪೊಲೀಸ್‌ ಠಾಣೆ ಎದುರು ಮಾಜಿ ಸಚಿವ ಸಿ.ಟಿ.ರವಿ ಗುರುವಾರ ಪ್ರತಿಭಟನೆ ನಡೆಸಿದ್ದರು. ಇದರ ಫೋಟೋವನ್ನು ಎಡಿಟ್‌ ಮಾಡಿ ಕಾಂಗ್ರೆಸ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ‘ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ.. ನನ್ನನ್ನೂ ಬಂಧಿಸಿ’ ಎಂದು ಸಿ.ಟಿ.ರವಿಗೆ ಕಾಂಗ್ರೆಸ್‌ ಠಕ್ಕರ್‌ ಕೊಟ್ಟಿದೆ. ‘ಸಿಟಿ ರವಿ ಅವರೇ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ’ ಎಂದು ಮಾರ್ಮಿಕವಾಗಿ ನುಡಿದಿದೆ.

ನನ್ನನ್ನೂ ಬಂಧಿಸಿ ಎನ್ನುತ್ತಿರುವ @karkalasunil ಅವರೇ,

ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ?

ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ? pic.twitter.com/bgTdrd22ZF

— Karnataka Congress (@INCKarnataka) January 5, 2024

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕೈಯಲ್ಲಿ, ‘ನಾನು ಆರ್‌ಟಿಜಿಎಸ್‌ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿಯ ಅಕ್ರಮದಲ್ಲಿ ಪಾಲುದಾರ.. ನನ್ನನ್ನೂ ಬಂಧಿಸಿ’ ಎಂದು ಬರೆದಿರುವ ಪೋಸ್ಟರ್‌ ಹಿಡಿಸಿ ಠಕ್ಕರ್‌ ಕೊಟ್ಟಿದೆ. ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಅವರು ಈ ಪೋಸ್ಟರ್‌ ಹಿಡಿದು ಕುಳಿತರೆ ಸೂಕ್ತ. ಬಿಜೆಪಿಗರೆಲ್ಲರೂ ‘ನನ್ನನ್ನು ಬಂಧಿಸಿ’ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟ – ಉದ್ದೇಶಪೂರ್ವಕವಾಗಿ ಸರ್ಕಾರದಿಂದಲೇ ಕೇಸ್‌ಗೆ ಮರುಜೀವ?

,@ikseshwarappa ಅವರು ಹಿಡಿಯಬೇಕಾದ ಪೋಸ್ಟರ್ ಇದು!

ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ! pic.twitter.com/8Q4i4Ckcqb

— Karnataka Congress (@INCKarnataka) January 5, 2024

ನಾನು ಪರಶುರಾಮನ ಮೂರ್ತಿಯ ಕಂಚನ್ನು ಕದ್ದಿದ್ದೇನೆ. ಸರ್ಕಾರಿ ಸಿಮೆಂಟ್‌ ಕದ್ದಿದ್ದೇನೆ. ನನ್ನನ್ನೂ ಬಂಧಿಸಿ ಎಂದು ಮಾಜಿ ಸಚಿವ ಸುನಿಲ್‌ ಕುಮಾರ್‌ ಅವರ ಫೋಟೋ ಕೂಡ ಎಡಿಟ್‌ ಮಾಡಿ ಕಾಂಗ್ರೆಸ್‌ ಹಂಚಿಕೊಂಡಿದೆ. ನನ್ನನ್ನು ಬಂಧಿಸಿ ಎನ್ನುತ್ತಿರುವ ಸುನಿಲ್‌ ಕುಮಾರ್‌ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ ಎಂದು ಖಾರವಾಗಿ ಕಾಂಗ್ರೆಸ್‌ ಪ್ರಶ್ನಿಸಿದೆ.

,@mepratap ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ,

ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ! pic.twitter.com/qD4pO11CUL

— Karnataka Congress (@INCKarnataka) January 5, 2024

ನಾನು 40% ಕಮಿಷನ್‌ ನುಂಗಿ ಸಂತೋಷ್‌ ಪಾಟೀಲ್‌ ಸಾವಿಗೆ ಕಾರಣನಾಗಿದ್ದೇನೆ. ನನ್ನನ್ನೂ ಬಂಧಿಸಿ ಎಂಬ ಪೋಸ್ಟರ್‌ ಹಿಡಿಸಿ ಮಾಜಿ ಸಚಿವ ಈಶ್ವರಪ್ಪಗೆ ತಿರುಗೇಟು ನೀಡಲಾಗಿದೆ. ಈಶ್ವರಪ್ಪ ಅವರು ಹಿಡಿಯಬೇಕಾದ ಪೋಸ್ಟರ್ ಇದು! ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ ಎಂದು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ನಾನೂ ಕರಸೇವಕ, ನನ್ನನ್ನೂ ಬಂಧಿಸಿ – ಅಭಿಯಾನ ಆರಂಭಿಸಿದ್ದ ಸುನಿಲ್‌ ಕುಮಾರ್‌ ವಶಕ್ಕೆ

ನಾನು ಸಂಸತ್‌ ದಾಳಿಕೋರರಿಗೆ ಪಾಸ್‌ ಕೊಟ್ಟು ಸಹಕರಿಸಿದ್ದೇನೆ. ನನ್ನನ್ನೂ ಬಂಧಿಸಿ ಎಂದು ಸಂಸದ ಪ್ರತಾಪ್‌ ಸಿಂಹ ಅವರ ಕೈಯಲ್ಲಿ ಪೋಸ್ಟರ್‌ ಹಿಡಿಸಿ ಕಾಂಗ್ರೆಸ್‌ ಟಾಂಗ್‌ ಕೊಟ್ಟಿದೆ. ಪ್ರತಾಪ್‌ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ ಎಂದು ವಾಗ್ದಾಳಿ ನಡೆಸಿದೆ.

TAGGED:bjpcongressಕಾಂಗ್ರೆಸ್ಬಿಜೆಪಿ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Electricity
Bengaluru City

ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್ – ಯೂನಿಟ್‌ಗೆ 56 ಪೈಸೆ ಹೆಚ್ಚಳ

Public TV
By Public TV
14 seconds ago
Rahul Gandhi 3
Latest

ದ್ವಿಪೌರತ್ವ ಪ್ರಕರಣ – ರಾಹುಲ್ ಗಾಂಧಿ ವಿರುದ್ಧ FIR ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ

Public TV
By Public TV
4 minutes ago
Loksabha
Latest

ಲೋಕಸಭೆಯಲ್ಲಿ ʻನಾರಿಶಕ್ತಿ ಬಿಲ್ʼ ತಿರಸ್ಕಾರ – ಗೆದ್ದ ವಿಪಕ್ಷಗಳ ಹಠ; NDA ಸರ್ಕಾರಕ್ಕೆ ಮುಖಭಂಗ

Public TV
By Public TV
32 minutes ago
Chandra Layout Kidnap
Bengaluru City

ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್

Public TV
By Public TV
40 minutes ago
Strait of Hormuz 1
Latest

ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಓಪನ್‌ – ಧನ್ಯವಾದ ಹೇಳಿದ ಟ್ರಂಪ್‌

Public TV
By Public TV
42 minutes ago
Yogesh Gowda Wife Mallamma
Dharwad

ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?