-2024-25ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ 6,074.02 ಕೋಟಿ ದೇಣಿಗೆ
ನವದೆಹಲಿ: ಕಾಂಗ್ರೆಸ್ ಪಕ್ಷದ ದೇಣಿಗೆ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ. 2025-26ನೇ ಹಣಕಾಸು ವರ್ಷದಲ್ಲಿ ಪಕ್ಷವು 130.69 ಕೋಟಿ ರೂ. ದೇಣಿಗೆ ಪಡೆದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.75ರಷ್ಟು ಕುಸಿತ ಕಂಡಿದೆ. ಒಂದು ದಶಕದಲ್ಲಿ ದೇಣಿಗೆ ಸಂಗ್ರಹದಲ್ಲಿ ದಾಖಲಾದ ಅತಿ ದೊಡ್ಡ ವಾರ್ಷಿಕ ಇಳಿಕೆ ಇದಾಗಿದೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷ ಸಲ್ಲಿಸಿರುವ ದಾಖಲೆಗಳು ತಿಳಿಸಿವೆ.
2024-25ನೇ ಹಣಕಾಸು ವರ್ಷದಲ್ಲಿ ಕಾಂಗ್ರೆಸ್ಗೆ 517.39 ಕೋಟಿ ರೂ. ದೇಣಿಗೆ ಬಂದಿತ್ತು. ಅದಕ್ಕೂ ಹಿಂದಿನ 2023-24ನೇ ಸಾಲಿನಲ್ಲಿ ಪಕ್ಷವು 281.48 ಕೋಟಿ ರೂ. ದೇಣಿಗೆ ಪಡೆದಿತ್ತು.
ಬಿಜೆಪಿಗೆ 12 ಪಟ್ಟು ಹೆಚ್ಚು ದೇಣಿಗೆ
2024-25ನೇ ಹಣಕಾಸು ವರ್ಷದಲ್ಲಿ ಬಿಜೆಪಿ 20,000 ರೂ.ಗಿಂತ ಹೆಚ್ಚಿನ ಮೊತ್ತದ ದೇಣಿಗೆಯಾಗಿ 6,074.02 ಕೋಟಿ ರೂ. ಪಡೆದಿತ್ತು. ಇದೇ ಅವಧಿಯಲ್ಲಿ ಕಾಂಗ್ರೆಸ್ ಸಂಗ್ರಹಿಸಿದ್ದ 517.39 ಕೋಟಿ ರೂ.ಗೆ ಹೋಲಿಸಿದರೆ ಬಿಜೆಪಿಯ ದೇಣಿಗೆ ಮೊತ್ತ ಸುಮಾರು 12 ಪಟ್ಟು ಹೆಚ್ಚಾಗಿದೆ.ಇದನ್ನೂ ಓದಿ: ದೀಪಾವಳಿ ಎಫೆಕ್ಟ್, ಹಾಸನಾಂಬ ದೇವಿ ದರ್ಶನಕ್ಕಿಂದು ಭಕ್ತರ ಸಂಖ್ಯೆ ಇಳಿಕೆ – ನ.11ಕ್ಕೆ ದೇವಾಲಯದ ಗರ್ಭಗುಡಿ ಬಂದ್
2025-26ರಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆದಿತ್ತು. 2026ರ ಏಪ್ರಿಲ್ನಲ್ಲಿ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲೂ ಚುನಾವಣೆಗಳು ನಡೆದಿದ್ದವು. ಇಷ್ಟೆಲ್ಲ ರಾಜಕೀಯ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ನ ದೇಣಿಗೆ ಆದಾಯದಲ್ಲಿ ಭಾರೀ ಕುಸಿತ ದಾಖಲಾಗಿದೆ.ಇದನ್ನೂ ಓದಿ: ಡಿವೈಎಸ್ಪಿ ಉಮಾರಾಣಿ ನೇತೃತ್ವದಲ್ಲಿ ದಾಳಿ; ಕಸಾಯಿಖಾನೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ
