– ಅರಾಜಕತೆ ತಡೆಗೆ ಕೇಂದ್ರ ಕ್ರಮ ತೆಗೆದುಕೊಂಡಿದೆ
– ರಾಹುಲ್ ಗಾಂಧಿ ಮೆಚ್ಚಿಸಲು ಡಿಕೆಶಿ ಡ್ರಾಮಾ
ಹುಬ್ಬಳ್ಳಿ: ನಾವು ಕಾನೂನನ್ನು ಮಾನ್ಯ ಮಾಡುವುದಿಲ್ಲ ಎನ್ನುವ ಕಾಂಗ್ರೆಸ್, ದೇಶದಲ್ಲಿ SIR ನೆಪದಲ್ಲಿ ಅರಾಜಕತೆ ಸೃಷ್ಟಿಸಲು ನೋಡುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ (Pralhad Joshi)ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ದೆಹಲಿಯಲ್ಲಿ ನಿನ್ನೆಯ ಪ್ರತಿಭಟನೆ ನ್ಯಾಯಸಮ್ಮತ ಹೋರಾಟ ಆಗಿರಲಿಲ್ಲ. ಬದಲಿಗೆ ಅರಾಜಕತೆ ಸೃಷ್ಟಿಸಲು ಮಾಡಿದ ಯತ್ನ ಎಂದು ಪ್ರತಿಕ್ರಿಯಿಸಿದರು.
ದೇಶದ ಶ್ರೇಷ್ಠ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಮಾದರಿಯಲ್ಲೇ SIR ನ್ಯಾಯ ಮತ್ತು ಅತ್ಯಂತ ಪಾರದರ್ಶಕ ಪದ್ಧತಿಯಲ್ಲಿ ನಡೆಯುತ್ತಿದೆ. ಹಾಗಿದ್ದರೂ ಇದರ ವಿರುದ್ಧ ಕಾಂಗ್ರೆಸ್, ಸಿಜೆಪಿ ಹೋರಾಟ ನಡೆಸುತ್ತಿರುವುದು ಅರಾಜಕತೆ ತರಲು ಎಂದು ಆರೋಪಿಸಿದರು.
ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವುದನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂತೆಯೇ ನಿನ್ನೆ ಅರಾಜಕತೆ ತಡೆಯಲು, ನಿಯಂತ್ರಿಸಲು ಕನಿಷ್ಠ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಮೃತರ ಮತ್ತು ನಕಲಿ ವೋಟ್ ಇರಬೇಕೇ?
ಪ್ರಸ್ತುತ SIR ಪ್ರಕ್ರಿಯೆ ವೇಳೆ ಸರಿಸುಮಾರು 3 ಕೋಟಿ ಹೆಸರುಗಳು ಮೃತರು ಮತ್ತು 3 ಕೋಟಿ ಹೆಸರುಗಳು ಡಬಲ್ ವೋಟರ್ಸ್ ಹಾಗೂ ನಕಲಿ ವೋಟರ್ಸ್ ಪತ್ತೆ ಹಚ್ಚಲಾಗಿದೆ. ಮತದಾರರ ಪಟ್ಟಿಯಲ್ಲಿ ಇವನ್ನೆಲ್ಲಾ ಸೇರಿಸಬೇಕೇ ಎಂದು ಪ್ರಶ್ನಿಸಿದರು.
ಎಸ್‌ಐಆರ್‌ನಲ್ಲಿ 13 ಕೋಟಿ ಪತ್ತೆಯಿಲ್ಲದ ಮತದಾರರ ಹೆಸರು ಮರು ಸೇರ್ಪಡೆ ಮಾಡಬೇಕು ಎಂಬುದು ಕಾಂಗ್ರೆಸ್ ಬೇಡಿಕೆಯಾಗಿದೆ. ಆದರೆ, ಇದರಲ್ಲಿ ಮೃತರು, ಸ್ಥಳಾಂತರ ಆದವರು, ನಕಲಿ ಮತದಾರರು, ಅಕ್ರಮ ವಲಸಿಗರು ಹೀಗೆ ಅರ್ಹರಲ್ಲದವರೇ ಇದ್ದಾರೆ. ಇವರನ್ನೆಲ್ಲಾ ಸೇರಿಸಬೇಕಾ? ಒಂದು ವೇಳೆ ಅರ್ಹರಿದ್ದರೆ ಖುದ್ದಾಗಿ ಹಾಜರಾಗಿ ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಮುಕ್ತ ಅವಕಾಶ ನೀಡಿದೆ ಎಂದರು.
ರಾಹುಲ್ ಗಾಂಧಿ ಮೆಚ್ಚಿಸಲು ಡಿಕೆಶಿ ಡ್ರಾಮಾ
SIR ವಿಚಾರದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ನಾಯಕ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಏನೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ – ಪ್ರತಿಭಟನಾಕಾರರ ವಿರುದ್ಧ 20 ಕೇಸ್ ದಾಖಲು
ರಾಜ್ಯದಲ್ಲಿ 50 ಲಕ್ಷ ಮತದಾರರನ್ನು ತೆಗೆದು ಹಾಕಲು ಷಡ್ಯಂತ್ರ ನಡೆಸಿದ್ದಾರೆ ಎಂದಿದ್ದಾರೆ ಸಿಎಂ. ಆದರೆ, ಕೇವಲ 90 ಸಾವಿರ ಮತದಾರರ ಹೆಸರು ಅನರ್ಹರ ಪಟ್ಟಿಯಲ್ಲಿದೆ ಎಂದು ಇಲ್ಲಿನ ಮುಖ್ಯ ಚುನಾವಣಾಧಿಕಾರಿಯೇ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಷಡ್ಯಂತ್ರ ಮಾಡುತ್ತಿರುವುದು ಯಾರು ಎಂದು ಪ್ರಶ್ನಿಸಿದರು.
ಕೇಂದ್ರ SIR ನೀತಿ, ನಿಯಮ ರೂಪಿಸಿರಬಹುದು. ಆದರೆ, ಇಲ್ಲಿ ಕಾರ್ಯಗತಕ್ಕೆ ತರುತ್ತಿರುವುದು ಯಾರು? ತಹಶೀಲ್ದಾರ್, ಎಸಿ, ಡಿಸಿ ಎಲ್ಲಾರೂ ರಾಜ್ಯ ಸರ್ಕಾರದ ಅಧೀನದಲ್ಲಿ ಇರುವ ಅಧಿಕಾರಿಗಳೇ ಅಲ್ಲವೇ? ಕೇಂದ್ರದ ಷಡ್ಯಂತ್ರ ಏನಿದೆ ಇದರಲ್ಲಿ ಎಂದು ಸಿಎಂಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ದಸರಾ ಉದ್ಘಾಟಿಸಲು ಬಂದಿಲ್ಲ, ನಾಡಿಗಾಗಿ ಪ್ರಾರ್ಥಿಸಲು ಬಂದಿದ್ದೇನೆ: ಗವಿಸಿದ್ದೇಶ್ವರ ಶ್ರೀ
ಪ್ರತಿಭಟನೆ ನಡೆಸಲು ಪ್ರಜಾಸತ್ತಾತ್ಮಕವಾಗಿ ಎಲ್ಲರಿಗೂ ಹಕ್ಕಿದೆ. ಅವಕಾಶವಿದೆ. ಆದರೆ, ನಾವು ಭಾರತದ ಕಾನೂನನ್ನೇ ಮಾನ್ಯ ಮಾಡುವುದಿಲ್ಲ. ಸಂವಿಧಾನವನ್ನು ಅನುಸರಿಸುವುದಿಲ್ಲ ಎನ್ನುವುದು ಅರಾಜಕತೆ ಉಂಟು ಮಾಡುವುದನ್ನು ತೋರ್ಪಡಿಸುತ್ತದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

