ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸುವುದು, ಭಾರೀ ಮಳೆಯಾಗಿ ಹಲವೆಡೆ ಪ್ರವಾಹ ಉಂಟಾಗುವುದನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಮಳೆಯನ್ನು ಪ್ರೀತಿಸುವುದರ ಜೊತೆಗೆ ದ್ವೇಷಿಸುವವರ ಸಂಖ್ಯೆ ಕೂಡ ಸಮವಾಗಿದೆ. ಅದರಲ್ಲಿಯೂ ಪ್ರಣಯ ಪಕ್ಷಿಗಳಿಗೆ ಮಳೆಗಾಲ ಬಹಳ ಅಚ್ಚುಮೆಚ್ಚು. ಆದರೆ ಎಲ್ಲಾದರೂ ಹೊರಡುವಾಗ ಮಳೆಯಲ್ಲಿ ಸಿಕ್ಕಿಹಾಕಿಕೊಂಡರೇ ಅಷ್ಟೇ ಕಿರಿಕಿರಿ ಕೂಡ ಉಂಟಾಗುತ್ತದೆ. ಎಷ್ಟೋ ಜನ ಮಳೆಗಾಲದಲ್ಲಿ ಛತ್ರಿಯನ್ನು ಉಪಯೋಗಿಸುತ್ತಾರೆ. ಛತ್ರಿ ನಿಮ್ಮ ಮೇಲ್ಭಾಗ ಮಾತ್ರ ತೇವವಾಗುವುದರಿಂದ ರಕ್ಷಿಸಿದರೆ, ನಿಮ್ಮ ಮೊಣಕಾಲಿನಿಂದ ಒದ್ದೆಯಾಗಿಸುತ್ತದೆ. ಇದರಿಂದ ನಿಮಗೆ ನಡೆದಾಡಲೂ ಸಹ ಕಷ್ಟವಾಗುತ್ತದೆ. ಅಲ್ಲದೇ ಮಳೆ ಬರುವ ಸಂದರ್ಭದಲ್ಲಿ ಬ್ಯಾಗ್‍ಗಳು, ವ್ಯಾಲೆಟ್‍ಗಳು ಅಥವಾ ಸ್ಮಾರ್ಟ್‍ಫೋನ್‍ಗಳ ಜೊತೆಗೆ ಛತ್ರಿಯನ್ನು ಹಿಡಿದಿಟ್ಟುಕೊಳ್ಳಲು ಮತ್ತಷ್ಟು ಕಿರಿಕಿರಿಯಾಗುತ್ತದೆ. ಈ ಎಲ್ಲದಕ್ಕೂ ಪರಿಹಾರ ಅಂದರೆ ರೈನ್ ಕೋಟ್. ಮಳೆಗಾಲದಲ್ಲಿ ರೈನ್ ಕೋಟ್ ಧರಿಸುವುದು ಬಹಳ ಉತ್ತಮವಾಗಿದೆ.
Advertisement
ಮಳೆಗಾಲಗಳು ಛತ್ರಿಗಳಿಗಿಂತಲೂ ಹೆಚ್ಚಾಗಿ ರೈನ್‍ಕೋಟ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಇದು ನಿಮ್ಮ ಬ್ಯಾಗ್ ಅಲ್ಲದೇ ತಲೆಯಿಂದ ಪಾದದವರೆಗೂ ನಿಮ್ಮನ್ನು ಮಳೆಯಿಂದ ರಕ್ಷಿಸುತ್ತದೆ. ಅಲ್ಲದೇ ರೈನ್ ಕೋಟ್‍ನಲ್ಲಿ ಹಲವಾರು ವೆರೈಟಿ ಡಿಸೈನ್, ಸೈಜ್, ಅನೇಕ ನ್ಯೂ ಪ್ಯಾಟನ್‍ಗಳು ದೊರೆಯುತ್ತದೆ. ಈ ಕುರಿತಂತೆ ನಿಮಗೆ ತಿಳಿಯದೇ ಇರುವ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.
Advertisement
Advertisement
ಪುರುಷರ ರೈನ್ ಕೋಟ್
ಪುರುಷರ ಈ ರೈನ್ ಕೋಟ್ ನಿಮಗೆ ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದರಲ್ಲಿ ಜಾಕೆಟ್ ಜೊತೆಗೆ ಬಾಟಮ್ ಕೂಡ ಬರುತ್ತದೆ. ಈ ರೇನ್‍ಕೋಟ್ ನಿಮಗೆ ಮೇಲಿನ ಮತ್ತು ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದು ಜಾಕೆಟ್ ಜೊತೆಗೆ ಬಾಟಮ್‍ನೊಂದಿಗೆ ಬರುತ್ತದೆ. ಈ ಜಾಕೆಟ್ ಇದು ಡ್ರಾಸ್ಟಿಂಗ್ ಮತ್ತು ಎಲಾಸ್ಟಿಕ್ ವೆಸ್ಟ್ ನೊಂದಿಗೆ ಬರುತ್ತದೆ. ಇದನ್ನು ನೀವು ನಿಮಗೆ ಹೇಗೆ ಬೇಕೋ ಹಾಗೇ ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಇದು 100% ನಿಮ್ಮನ್ನು ಮಳೆ ಹಾಗೂ ಗಾಳಿಯಿಂದ ರಕ್ಷಣೆ ನೀಡುತ್ತದೆ.
Advertisement
ಮಹಿಳೆಯರ ವಾಟರ್‌ಪ್ರೂಫ್ ಜಾಕೆಟ್
ಮಹಿಳೆಯರು ಯಾವಾಗಲೂ ಒಂದೇ ರೀತಿಯ ರೈನ್ ಕೋಟ್ ಮೇಲೆ ಅವಲಂಬಿತರಾಗಿರುವುದಿಲ್ಲ. ಹಲವಾರು ವೇಳೆ ರೈನ್ ಕೋಟ್ ಬದಲಾಯಿಸುತ್ತಿರಬೇಕಾಗುತ್ತದೆ. ಸದ್ಯ ಈ ನೀಡಲಾಗಿರುವ ರೈನ್ ಕೋಟ್ ಅನ್ನು ಸೈಕ್ಲಿಂಗ್ ಹಾಗೂ ಬೈಕ್‍ನಲ್ಲಿ ಸವಾರಿ ಮಾಡುವಾಗ ಧರಿಸಬಹುದಾಗಿದೆ. ಮಳೆ ಬರುವ ವೇಳೆ ರಸ್ತೆಯಲ್ಲಿ ಹೋಗುವಾಗ ಬಸ್, ಕಾರು ಅಥವಾ ಇತರೆ ವಾಹನಗಳು ಜೋರಾಗಿ ಸಂಚರಿಸು ವೇಲೆ ರಸ್ತೆ ಗುಂಡಿಯಲ್ಲಿರುವ ಕೊಚ್ಚೆ ನೀರು, ಮಳೆ ಹನಿಗಳಿಂದ ನಿಮ್ಮನ್ನು ರಕ್ಷಿಸುವುದರ ಜೊತೆಗೆ ನಿಮ್ಮ ಪ್ರಯಾಣವನ್ನು ಸರಾಗಗೊಳಿಸುತ್ತದೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದ್ದು, ತನಿಖೆ ನಡೀತಿದೆ: ಬೊಮ್ಮಾಯಿ
ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್
ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್ ಯುನಿಸೆಕ್ಸ್ ರೈನ್‍ಕೋಟ್ ಆಗಿದ್ದು, ಇದು ನಿಮ್ಮ ಜೊತೆಗೆ ನಿಮ್ಮ ಬ್ಯಾಗ್ ಅನ್ನು ಸಹ ತೇವದಿಂದ ರಕ್ಷಿಸುತ್ತದೆ. ಇದು ಪ್ಯಾಕಿಂಗ್ ಪೌಚ್‍ನೊಂದಿಗೆ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಈ ರೈನ್ ಕೋಟ್ ಅನ್ನು ಸುಲಭವಾಗಿ ಧರಿಸಬಹುದಾಗಿದೆ.
ಮೆನ್ ವಾಟರ್‌ಪ್ರೂಫ್ ಡಬಲ್ ಲೇಯರ್ ರಿವರ್ಸಿಬಲ್ ರೈನ್‍ಕೋಟ್
ಈ ರಿವರ್ಸಿಬಲ್ ರೇನ್‍ಕೋಟ್ ಪುರುಷರಿಗೆಂದೇ ಮೀಸಲಾಗಿದೆ. ಇದು ಜಾಕೆಟ್ ಜೊತೆಗೆ ಬರುತ್ತದೆ ಮತ್ತು ಭಾರೀ ಮಳೆಯಾಗುತ್ತಿರುವ ವೇಳೆ ಕೂಡ ನಡೆಯಲು ಸಾಕಷ್ಟು ಆರಾಮದಾಯಕವಾಗಿರುತ್ತದೆ. ಈ ರೈನ್‍ಕೋಟ್ ಅನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ ಮತ್ತು ಇದು ಬೇಗನೆ ಒದ್ದೆಯಿಂದ ಒಣಗುತ್ತದೆ. ಇದನ್ನೂ ಓದಿ: ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ