ಬೆಂಗಳೂರು: ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಅಡಿ ಒಂದು ಕೇಸ್ ದಾಖಲಾಗಿದೆ. ಅಲ್ಲದೆ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದೆ. ಈ ಎರಡೂ ಕೇಸ್ ಗಳನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Advertisement
Advertisement
ಮುರುಘಾರಾಜೇಂದ್ರ ಶ್ರೀಗಳ ವಿರುದ್ಧ ಪೋಕ್ಸೋ ದೂರು ದಾಖಲು ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ದೃಷ್ಟಿಯಿಂದ ಈ ಹಂತದಲ್ಲಿ ಮಾತಾಡೋದು ಸೂಕ್ತ ಅಲ್ಲ. ಪೊಲೀಸರು ತನಿಖೆ ಮಾಡ್ತಿದ್ದಾರೆ, ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಪೋಕ್ಸೋ ಅಡಿ ಒಂದು ಕೇಸ್ ದಾಖಲಾಗಿದೆ. ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದೆ. ಎರಡೂ ಕೇಸ್ ಗಳ ಕುರಿತು ಸಂಬಂಧಪಟ್ಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ- ಬೆಳಗ್ಗಿನ ಜಾವದವರೆಗೂ ನಡೆದ ರಾಜಿ ಸಂಧಾನ ಸಭೆ
ಇತ್ತ ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆಯೇ ನಿನ್ನೆಯಿಂದ ಮುರುಘಾ ಶ್ರೀಗಳು ಹೊರಗೆ ಬಾರದೇ ಮಠದ ಒಳಗಡೆಯೇ ಕೂತಿದ್ದರು. ಇಂದು ಮಠದ ಆವರಣದಲ್ಲಿರುವ ಶಾಂತವೀರ ಮುರುಗಿ ಶ್ರೀಗಳ ಗದ್ದಿಗೆಗೆ ತೆರಳಿ ದರ್ಶನ ಪಡೆದಿದ್ದಾರೆ.