Bengaluru CityCinemaDistrictsKarnatakaLatestMain PostSandalwood

ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ

ಬಿಗ್‍ಬಾಸ್‍ನಲ್ಲಿ ಸ್ಪರ್ಧಿ ಉದಯ್ ಎಲ್ಲರ ಬಳಿಯೂ ಎಲ್ಲರ ಬಗ್ಗೆ ಮಾತನಾಡಿರುತ್ತಾರೆ. ಹೀಗಾಗಿ ಉದಯ್‍ಗೆ ಮನೆಮಂದಿ ಪೋಸ್ಟ್ ಮಾಸ್ಟರ್ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾನ್ಯಾ ಜೊತೆ ಸ್ನೇಹದಲ್ಲಿದ್ದಾಗ ಬೆಳೆಸಿಕೊಂಡ ಸಲಿಗೆಯನ್ನು ಕೆಟ್ಟದಾಗಿ ಮಾತನಾಡಿದ್ದನು. ಇದೀಗ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರವನ್ನು ಪ್ರಸ್ತಾಪ ಮಡುವ ಮೂಲಕ ಉದಯ್ ಗೆ ಮನದಟ್ಟು ಮಾಡಿಸಿದ್ದಾರೆ.

ವಾರದ ಕಥೆಯಲ್ಲಿ ಸುದೀಪ್ ಅವರು ಉದಯ್ ಜೊತೆ ಮಾತನಾಡುತ್ತಾ, ಈ ಮನೆಯಲ್ಲಿ ನಿಮಗೊಂದು ಅಡ್ಡ ಹೆಸರಿದೆ ಗೊತ್ತಾ ಎಂದು ಕೇಳುತ್ತಾರೆ. ಆಗ ಉದಯ್ ಇಲ್ಲ ಸರ್ ಎಂದು ಹೇಳುತ್ತಾರೆ. ಹಾಗಾದರೆ ಯಾರಿಗಾದರೂ ಗೊತ್ತಿದ್ದರೆ ಹೇಳಿ ಎಂದಾಗ ಆರ್ಯವರ್ಧನ್, ನನಗೆ ಗೊತ್ತು ಎಂದು ಹೇಳುತ್ತಾ, ಪೋಸ್ಟ್ ಮ್ಯಾನ್ ಕೆಲಸ. ಅವರ ಬಾಯಿ ಸುಮ್ಮನೆ ಇರಲ್ಲ. ಅಲ್ಲಿ ಇಲ್ಲಿ ಹೇಳಿ ಬಿಡುತ್ತಾರೆ. ಜಗಳ ಆಡುವಾಗ ನನ್ನ ಬೇಡ ಹೋಗಿ ಎನ್ನುತ್ತಾರೆ. ಇದಕ್ಕೆ ಬೈಸಿಕೊಂಡು ಇದ್ದಾರೆ ಎಂದು ಹೇಳುತ್ತಾರೆ.

ಈ ವೇಳೆ ಸುದೀಪ್ ಅವರು, ಉದಯ್ ಅವರೇ ಚೈತ್ರಾ ಬಳಿ ಹೋಗಿ ಸಾನ್ಯಾ ಬಗ್ಗೆ ಅಂದು ಹೇಳಿದ ಮಾತು ಹಾಗೂ ನಂದಿನಿ ಮತ್ತು ಜಶ್ವಂತ್ ಅವರ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದು ತುಂಬಾ ಗೊಂದಲಕ್ಕೆ ಕಾರಣವಾಗಿದೆ. ಅದು ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಜನ ನೋಡಿದ್ದಾರೆ, ನಾವೂ ನೋಡಿದ್ದೀವಿ ನೋಡಿದವರಿಗೆ ಒಂದು ಕ್ಲಾರಿಟಿ ಇದೆ. ಆದರೆ ಮನೆಯವರಿಗೆ ಇನ್ನೂ ಯಾವ ಕ್ಲಾರಿಟಿ ಇಲ್ಲ. ಹೀಗಾಗಿ ನಾನು ಒಂದು ಅವಕಾಶ ಕೊಡ್ತೀನಿ, ಎಲ್ಲಿಂದ, ಯಾಕೆ ಸ್ಟಾರ್ಟ್ ಆಯ್ತು, ಹೇಗೆ ಎಂಡ್ ಆಯ್ತು, ಚೈತ್ರಾ ಅವರ ಬಳಿ ಹೋಗಿ ನೀವೂ ಹೇಳಿದ್ದೇನು ಅನ್ನೋದನ್ನು ಕ್ಲಿಯರ್ ಆಗಿ ಹೇಳಿ ಎಂದಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಔಟ್

ಕಿಚ್ಚ ಈ ರೀತಿ ಹೇಳುತ್ತಿದ್ದಂತೆಯೇ ಉದಯ್ ತಬ್ಬಿಬ್ಬಾಗುತ್ತಾರೆ. ಅಲ್ಲದೆ ಪ್ರತಿಕ್ರಿಯಿಸುತ್ತಾ, ಚೈತ್ರಾ ಬಳಿ ಹೋಗಿ ಹೇಳಿದೆ. ಜಶ್ವಂತ್ ಹೋಟೆಲ್ ಊಟಕ್ಕೆ ಹೋಗ್ತಾರೆ. ಇಲ್ಲಿ ಕ್ಯಾಮೆರಾ ಇಲ್ಲದೆ ಇದ್ದಾಗ ಏನೋ ಒಂದು ಆಗಬಹುದು ಎಂದು ಹೇಳಿದೆ ಸರ್ ಅನ್ನುತ್ತಾರೆ. ಆಗ ಸುದೀಪ್, ಸರಿಯಾದ ಕ್ಲಾರಿಟಿ ಸಿಕ್ಕಿಲ್ಲ ಅನ್ನುತ್ತಾ ಮತ್ತೆ ಪ್ರಶ್ನೆ ಮಾಡುತ್ತಾರೆ. ಇಷ್ಟೆ ಆಗಿದ್ದಿದ್ದರೆ ಜಶ್ವಂತ್ ನಿಮ್ಮ ನಡುವೆ ಮಾತುಕತೆಯಾಗುತ್ತಿತ್ತು. ಆದರೆ ಇಲ್ಲಿ ರೂಪೇಶ್ ಹೇಗೆ ಬಂದ್ರು, ಸಾನ್ಯಾ ಹೇಗೆ ಬಂದ್ರು ಅದನ್ನು ಕ್ಲಾರಿಟಿ ಕೊಡಿ ಎಂದಿದ್ದಾರೆ.

ಮತ್ತೆ ತಡಬಡಾಯಿಸಿದ ಉದಯ್, ಸಾನ್ಯಾ ಅವರ ಬಗ್ಗೆ ಮಾತು ಬಂದಾಗ ನನ್ನ ಮತ್ತು ಸಾನ್ಯಾ ನಡುವೆ ಕ್ಲೋಸ್ ನೆಸ್ ಇತ್ತು. ಅದು ಯಾವ ಮಟ್ಟಿಗೆ ಇತ್ತು ಎಂಬುದನ್ನು ಉದಾಹರಣೆ ಕೊಟ್ಟು ಹೇಳಿದೆ ಎಂದು ತೊದಲುತ್ತಲಕೇ ಉದಯ್ ಹೇಳಿದ್ದಾರೆ. ಆ ಉದಾಹರಣೆಯೇ ತುಂಬಾ ಮುಖ್ಯವಾಗಿದ್ದರಿಂದ ಏನು ಉದಾಹರಣೆ ಕೊಟ್ಟಿ ಹೇಳಿದ್ರಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆಗ ಉದಯ್, ಗುರೂಜಿ ಹತ್ರ ನಾನು ಕಲರ್ ಕೇಳಿನೇ ಪ್ರತಿ ದಿನ ಬಟ್ಟೆ ಹಾಕುವುದು. ಒಂದು ದಿನ ನಾನು ಕಲರ್ ಕೇಳುವಾಗ ಸಾನ್ಯಾ ಕೂಡ ನನ್ನ ಪಕ್ಕದಲ್ಲಿ ಇದ್ರು. ಆಗ ನನ್ನನ್ನು ಕೇಳಿದ್ರು. ಆ ಕಲರ್ ದು ಒಳ ಉಡುಪು ತೋರಿಸಿದರು. ಇದನ್ನೂ ಓದಿ: ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

ಆಗ ನಾನು ಹೇಳಿದೆ, ಬೇಕಾದರೇ ಗುರೂಜಿ ಹತ್ರ ಹೋಗಿ ತೋರಿಸು ಅವರು ಖುಷಿ ಖುಷಿಯಾಗಿ ಒಪ್ಪಿಕೊಳ್ಳುತ್ತಾರೆ ಎಂದೆ. ಅದಕ್ಕೆ ಅವರು, ಈ ಥರ ಎಲ್ಲಾ ಮಾತನಾಡುವ ಹಾಗಿಲ್ಲ ಅಂತ ನಡೆದ ವಿಚಾರವನ್ನು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸುದೀಪ್, ಚೈತ್ರಾ ಅವರನ್ನು ಹೊಗಳಿದ್ದಾರೆ. ಉದಯ್ ಅಂದು ಆ ಮಾತು ಹೇಳಿದಾಗ ನೀವು ನಡೆದುಕೊಂಡಿದ್ದು, ನಿಮಗೆ ಹೆಚ್ಚು ಗೌರವ ತಂದುಕೊಟ್ಟಿದೆ ಎಂದಿದ್ದಾರೆ.

Live Tv

Leave a Reply

Your email address will not be published.

Back to top button