– ಊಟದ ತಟ್ಟೆಯಲ್ಲಿ ರಾಶಿ ರಾಶಿ ಜಿರಳೆಗಳು
ಬೆಂಗಳೂರು: ಸ್ಟಾರ್ ಹೋಟೆಲ್‌ಗಳು ಆಯ್ತು.. ಈಗ ಸರ್ಕಾರಿ ವ್ಯಾಪ್ತಿಯ ಕ್ಯಾಂಟೀನ್‌ಗಳ ಮೇಲೆ ಆಹಾರ ಇಲಾಖೆ ದಾಳಿಗೆ ಮುಂದಾಗಿದೆ. ಅಶುಚಿತ್ವ ಹಿನ್ನೆಲೆಯಲ್ಲಿ ವಿಕಾಸಸೌಧ ಕ್ಯಾಂಟೀನ್‌ಗೆ (Vikasa Soudha Canteen) ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಮಂತ್ರಿಗಳು, ಐಎಎಸ್ ಅಧಿಕಾರಿಗಳ ಕ್ಯಾಂಟೀನ್‌ನಲ್ಲೇ ಕರ್ಮಕಾಂಡ ಬಯಲಾಗಿದೆ. ವಿಕಾಸಸೌಧದ ಹೋಟೆಲ್‌ನಲ್ಲಿ ಊಟದ ತಟ್ಟೆಯಲ್ಲಿ ರಾಶಿ ರಾಶಿ ಜಿರಳೆಗಳು ಕಂಡುಬಂದಿವೆ. ಅಶುಚಿತ್ವದಿಂದ ಕೂಡಿದ್ದ ಹೋಟೆಲ್‌ಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇದನ್ನೂ ಓದಿ: ಹೋಟೆಲ್ ಬಳಿಕ ಈಗ ಹಾಸ್ಟೆಲ್, ಪಿಜಿಗಳ ಸರದಿ – ಫುಡ್ ಟೆಸ್ಟ್‌ಗೆ ಖಾದರ್ ಸೂಚನೆ
ಕಳೆದ ಕೆಲ ದಿನಗಳಿಂದ ಆಹಾರ ಇಲಾಖೆ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಸ್ಟಾರ್ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ, ಆಹಾರ ಪದಾರ್ಥಗಳು, ತಿನಿಸುಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ, ಅವಧಿ ಮುಗಿದ ಪದಾರ್ಥಗಳು, ಹಾನಿಕಾರಕ ರಾಸಾಯನಿಕಯುಕ್ತ ವಸ್ತುಗಳು ಪತ್ತೆಯಾಗಿದೆ. ಹೋಟೆಲ್‌ಗಳಲ್ಲಿ ಸ್ವಚ್ಛತಾ ನಿಯಮಗಳ ಪಾಲನೆ ಆಗದಿರುವುದು ಕೂಡ ಕಂಡುಬಂದಿದೆ.
ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಡಾಬಾಗಳು ಮಾರ್ಗಸೂಚಿ ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ 1 ವರ್ಷ ಗುಟ್ಕಾ, ಪಾನ್ ಮಸಾಲಾ ನಿಷೇಧ

