ಬೆಂಗಳೂರು: ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ ಮನೆ ಮಾಡಿದೆ. ನಾಡಿನ ಜನತೆಗೆ ಗಣ್ಯರು ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಕನ್ನಡ ನಾಡು-ನುಡಿ-ಸಂಸ್ಕೃತಿಯ ಮಹತ್ವವನ್ನು ಸಾರಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಡಿ.ಕೆ.ಶಿವಕುಮಾರ್, ಕನ್ನಡ ರಾಜ್ಯೋತ್ಸವ – ಪ್ರಗತಿಯ ನಿತ್ಯೋತ್ಸವ. ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ, ಭಾಷೆ ಮತ್ತು ಬದುಕಿನ ಸೊಬಗನ್ನು ತನ್ನೊಡಲಲ್ಲಿ ಹೊತ್ತಿರುವ ಹೆಮ್ಮೆಯ ನಮ್ಮ ಕನ್ನಡ ನಾಡಿಗೆ ನಮನಗಳು. ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಆತ್ಮಗೌರವ ಮತ್ತು ಬದುಕಿನ ಉಸಿರು. ಕನ್ನಡದ ಕಂಪು ಜಗದಗಲ ಪಸರಿಸಲಿ, ಕನ್ನಡಿಗರ ಹೆಮ್ಮೆ ನಿತ್ಯವೂ ಬೆಳಗಲಿ. ನಾಡು, ನುಡಿ, ನೆಲ, ಜಲದ ರಕ್ಷಣೆಯ ಸಂಕಲ್ಪದೊಂದಿಗೆ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೇ ಜೀವಾಳ, ಕನ್ನಡವೇ ಚಿರಕಾಲ.
ಸಮಸ್ತ ನಾಡಬಾಂಧವರಿಗೆ ೭೧ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ನುಡಿ ನಮ್ಮೆಲ್ಲರ ಎದೆಯ ಬಡಿತವಾಗಲಿ.
೧೯೭೩ರಲ್ಲಿ ಈ ಪುಣ್ಯಭೂಮಿಗೆ ‘ಕರ್ನಾಟಕ’ವೆಂದು ಮರುನಾಮಕರಣಗೊಂಡ ಈ ಸುದಿನದ ಹಿಂದೆ ಸಮಸ್ತ ಕನ್ನಡಿಗರ ಬಹುಕಾಲದ ಕನಸು ಮತ್ತು ಆಶಯಗಳ ಸಾಕಾರದ ಚರಿತ್ರೆಯಿದೆ.
ನಾಡಿನ ಈ ಭವ್ಯ ಇತಿಹಾಸವನ್ನು ಸದಾ ನೆನಪಿನಲ್ಲಿಟ್ಟುಕೊಂಡು, ನಮ್ಮೆಲ್ಲರ ಹೆಮ್ಮೆಯ ಕನ್ನಡದ ಹಿರಿಮೆಯನ್ನು ವಿಶ್ವದೆತ್ತರಕ್ಕೆ ಮೆರೆಸೋಣ!
— DK Shivakumar (@DKShivakumar) November 1, 2026
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ಕನ್ನಡವೆಂದರೆ ಬರಿ ನುಡಿಯಲ್ಲ, ಅದು ನಮ್ಮ ಉಸಿರು ಮತ್ತು ಸಂಸ್ಕೃತಿ. ಕಾವೇರಿಯಿಂದ ಗೋದಾವರಿಯವರೆಗೆ ಹರಿದು ಬಂದಿರುವ ನಮ್ಮ ನಾಡಿನ ಪರಂಪರೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ. ನಮ್ಮ ನಾಡು-ನುಡಿಯ ಹಿರಿಮೆ ವಿಶ್ವದೆಲ್ಲೆಡೆ ಬೆಳಗಲಿ. ಕನ್ನಡ ನೆಲದಲ್ಲಿ ಹುಟ್ಟಿದ ನಾವೇ ಧನ್ಯರು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ಸಮಸ್ತ ನಾಡಬಾಂಧವರಿಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ನುಡಿ ನಮ್ಮೆಲ್ಲರ ಎದೆಯ ಬಡಿತವಾಗಲಿ. 1973ರಲ್ಲಿ ಈ ಪುಣ್ಯಭೂಮಿಗೆ ‘ಕರ್ನಾಟಕ’ವೆಂದು ಮರುನಾಮಕರಣಗೊಂಡ ಈ ಸುದಿನದ ಹಿಂದೆ ಸಮಸ್ತ ಕನ್ನಡಿಗರ ಬಹುಕಾಲದ ಕನಸು ಮತ್ತು ಆಶಯಗಳ ಸಾಕಾರದ ಚರಿತ್ರೆಯಿದೆ. ನಾಡಿನ ಈ ಭವ್ಯ ಇತಿಹಾಸವನ್ನು ಸದಾ ನೆನಪಿನಲ್ಲಿಟ್ಟುಕೊಂಡು, ನಮ್ಮೆಲ್ಲರ ಹೆಮ್ಮೆಯ ಕನ್ನಡದ ಹಿರಿಮೆಯನ್ನು ವಿಶ್ವದೆತ್ತರಕ್ಕೆ ಮೆರೆಸೋಣ ಎಂದು ಸಿಎಂ ಕರೆ ನೀಡಿದ್ದಾರೆ.
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು..
ಕನ್ನಡವೇ ಸತ್ಯ, ಕನ್ನಡವೇ ನಿತ್ಯ 🙏
ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಆಚರಿಸೋಣ. ಹೆತ್ತ ತಾಯಿಗಿಂತ, ಹೊತ್ತ ನೆಲ ದೊಡ್ಡದು. ನಮ್ಮ ಹೆಮ್ಮೆಯ ಕನ್ನಡ ನಾಡು ಜನ್ಮ ತಳೆದ ಈ ಶುಭ ದಿನದಂದು ಜಗದಗಲಕ್ಕೂ ಕನ್ನಡದ ಹಿರಿಮೆಯನ್ನು ಸಾರೋಣ. ಸಮಸ್ತ ನಾಡಪ್ರಭುಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಜೈ ಕರ್ನಾಟಕ ಮಾತೆ 🙏
ಜೈ ಭುವನೇಶ್ವರಿ 🙏#ಕರ್ನಾಟಕರಾಜ್ಯೋತ್ಸವ
#ಕನ್ನಡ
#KarnatakaRajyotsava2026
#Karnataka— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 1, 2026
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಆಚರಿಸೋಣ. ಹೆತ್ತ ತಾಯಿಗಿಂತ, ಹೊತ್ತ ನೆಲ ದೊಡ್ಡದು. ನಮ್ಮ ಹೆಮ್ಮೆಯ ಕನ್ನಡ ನಾಡು ಜನ್ಮ ತಳೆದ ಈ ಶುಭ ದಿನದಂದು ಜಗದಗಲಕ್ಕೂ ಕನ್ನಡದ ಹಿರಿಮೆಯನ್ನು ಸಾರೋಣ. ಸಮಸ್ತ ನಾಡಪ್ರಭುಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಜೈ ಕರ್ನಾಟಕ ಮಾತೆ. ಜೈ ಭುವನೇಶ್ವರಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಶುಭಕೋರಿದ್ದಾರೆ.
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸುತ್ತ, ನನ್ನೆಲ್ಲ ಪ್ರೀತಿಯ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಸವಿಗನ್ನಡದ ಕಂಪು ನಿತ್ಯ ಪಸರಿಸಲಿ. ಪ್ರತಿ ಮನೆ-ಮನವೂ ಕನ್ನಡವಾಗಲಿ.
ಜೈ ತಾಯಿ ಭುವನೇಶ್ವರಿ.
ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ. https://t.co/uiEIwbEWLq— R. Ashoka (@RAshokaBJP) November 1, 2026
ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯ ಶಿವ.. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸುತ್ತ, ನನ್ನೆಲ್ಲ ಪ್ರೀತಿಯ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಸವಿಗನ್ನಡದ ಕಂಪು ನಿತ್ಯ ಪಸರಿಸಲಿ. ಪ್ರತಿ ಮನೆ-ಮನವೂ ಕನ್ನಡವಾಗಲಿ. ಜೈ ತಾಯಿ ಭುವನೇಶ್ವರಿ. ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಶುಭಾಶಯ ತಿಳಿಸಿದ್ದಾರೆ.
