Connect with us

ಶಾಲಾ ಆವರಣದಲ್ಲೇ 1ನೇ ಕ್ಲಾಸ್ ಬಾಲಕಿಯ ಮೇಲೆ 5ನೇ ತರಗತಿಯ ವಿದ್ಯಾರ್ಥಿಗಳಿಂದ ಗ್ಯಾಂಗ್ ರೇಪ್

ಶಾಲಾ ಆವರಣದಲ್ಲೇ 1ನೇ ಕ್ಲಾಸ್ ಬಾಲಕಿಯ ಮೇಲೆ 5ನೇ ತರಗತಿಯ ವಿದ್ಯಾರ್ಥಿಗಳಿಂದ ಗ್ಯಾಂಗ್ ರೇಪ್

ಲಕ್ನೋ: ಸರ್ಕಾರಿ ಶಾಲೆಯ ಹೊರ ಆವರಣದಲ್ಲೇ 5ನೇ ತರಗತಿಯ 3 ವಿದ್ಯಾರ್ಥಿಗಳು 1ನೇ ತರಗತಿ ಓದುತ್ತಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಶಾಲೆಯ ಹೊರ ಆವರಣದಲ್ಲಿ 5ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಂತ್ರಸ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ಕಿರುಚಾಟ ಕೇಳಿ ಅದೇ ದಾರಿಯಲ್ಲಿ ಹೋಗುತ್ತಿದ್ದವರು ಸಹಾಯ ಮಾಡಲು ಓಡಿ ಬಂದಿದ್ದಾರೆ. ಈ ವೇಳೆ ಬಾಲಾರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವಿಚಾರದ ಬಗ್ಗೆ ತಿಳಿದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂತ್ರಸ್ತೆಯ ತಂದೆ ಶಿಕ್ಷಕರು ಸರಿಯಾಗಿ ಮಕ್ಕಳನ್ನು ನೋಡಿಕೊಳ್ಳದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಆದರೆ ಶಾಲೆಯ ಪ್ರಾಧ್ಯಾಪಕ ಈ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಘಟನೆ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾದ ಮೇಲೆ ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇಬ್ಬರು ಶಿಕ್ಷಕರನ್ನು ಶಿಕ್ಷ ಮಿತ್ರ ಯೋಜನೆಯಡಿ ಅತಿಥಿ ಶಿಕ್ಷಕರಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಶಿಕ್ಷಣಾಧಿಕಾರಿ ಅಜಿತ್ ಕುಮಾರ್ ಹೇಳಿದರು.

Advertisement
Advertisement