‘ಖಾಕಿ’ ತೊಡದೆಯೇ ಖಡಕ್ ಲುಕ್ ನಲ್ಲಿ ಚಿರು ಅಬ್ಬರಿಸಿದ್ದಾರೆ. ಈಗಾಗಲೇ ದೊಡ್ಡ ದೊಡ್ಡ ನಟರು ಈ ಸಿನಿಮಾದ ಟ್ರೇಲರ್ ನೋಡಿ ಇಷ್ಟಪಟ್ಟಿದ್ದಾರೆ. ಸಕ್ಸಸ್ ಕಾಣುತ್ತೆ ಎಂಬ ಭರವಸೆ ಮಾತುಗಳನ್ನು ಆಡಿದ್ದಾರೆ. ಚಿರಂಜೀವಿ ಸರ್ಜಾ ಅವರ ನಟನೆ ಕೂಡ ಅದ್ಭುತವಾಗಿ ಮೂಡಿಬಂದಿರುವುದು ಟ್ರೇಲರ್ ನಲ್ಲಿ ಎದ್ದು ಕಾಣುತ್ತಿದೆ. ಚಿತ್ರಮಂದಿರದಲ್ಲಿ ಸೀಟ್ ಮೇಲೆ ಕುಳಿತವರು ಎದ್ದೇಳದ ಹಾಗೇ ನೋಡುವಂತೆ ಮಾಡುವ ಸಾಮರ್ಥ್ಯ ಸಿನಿಮಾಗಿರುವುದು ಈಗಾಗಲೇ ಟ್ರೇಲರ್ ನಲ್ಲೇ ಸಾಬೀತಾಗಿದೆ.
Advertisement
ಲ್ಯಾಂಡ್ ಮಾಫಿಯಾನ ಹೇಗೆಲ್ಲ ಮಾಡಬಹುದು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಹಿಂದೆ ಲ್ಯಾಂಡ್ ಮಾಫಿಯಾ ಬಗ್ಗೆ ಸಾಕಷ್ಟು ಚಿತ್ರಗಳು ತೆರೆಗೆ ಬಂದಿದ್ದರು ಸಹ ಇದೊಂದು ರೀತಿ ವಿಭಿನ್ನವಾಗಿದೆ ಅಂತಾರೆ ನಟ ಉಪೇಂದ್ರ. ಹೌದು, ರಿಯಲ್ ಸ್ಟಾರ್ ಉಪೇಂದ್ರ ಕೂಡ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದು, ನಿರ್ದೇಶಕ ನವೀನ್ ರೆಡ್ಡಿ ನನ್ನ ಮಿತ್ರ. ಮಿತ್ರನ ದೃಷ್ಟಿಗಿಂತ ಒಬ್ಬ ನಿರ್ದೇಶಕನ ದೃಷ್ಟಿಯಲ್ಲಿ ಸಿನಿಮಾ ಅದ್ಭುತವಾಗಿ ಬಂದಿದೆ ಎಂದು ಹಾಡಿ ಹೊಗಳಿದ್ದಾರೆ.
Advertisement
ಟೈಟಲ್ ಹಾಗೂ ಟ್ಯಾಗ್ ಲೈನ್ ಮೂಲಕ ಸ್ಯಾಂಡಲ್ ವುಡ್‍ನಲ್ಲಿ ಸಂಚಲನ ಸೃಷ್ಟಿಸ್ತಿರೋ ಸಿನಿಮಾ ‘ಖಾಕಿ’. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ, ಮಾಸ್ ಲುಕ್ ನಲ್ಲಿ ಅಷ್ಟೆ ಅಲ್ಲದೆ ಲವ್ವರ್ ಬಾಯ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಲ್ಯಾಂಡ್ ಮಾಫಿಯಾದ ವಿರುದ್ಧ ಹೇಗೆ ಹೋರಾಡಬಹುದು, ಜನರನ್ನ ರಕ್ಷಿಸಲು ನಾಯಕ ತೆಗೆದುಕೊಳ್ಳುವ ರಿಸ್ಕ್ ಎಲ್ಲವೂ ಈಗಾಗಲೇ ಟ್ರೇಲರ್ ನಲ್ಲಿ ಅನಾವರಣಗೊಂಡಿದೆ.
Advertisement
Advertisement
ಚಿರಂಜೀವಿ ಸರ್ಜಾ ಅಭಿನಯದ ಈ ವರೆಗಿನ ಸಿನಿಮಾಗಳಿಗಿಂತಾ ‘ಖಾಕಿ’ ತೀರಾ ಭಿನ್ನವಾಗಿ ಮೂಡಿಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಟ್ರೇಲರ್ ನೋಡಿದ ಪ್ರತಿಯೊಬ್ಬರು ಸಿನಿಮಾಗಾಗಿ ಕಾಯುವಂತೆ ಮಾಡಿದೆ. ತರುಣ್ ಶಿವಪ್ಪ ನಿರ್ಮಾಣ ಎಂದಾಕ್ಷಣಾ ಸಹಜವಾಗಿಯೇ ಒಂದಷ್ಟು ನಿರೀಕ್ಷೆಗಳು ಹುಟ್ಟುತ್ತವೆ. ತರುಣ್ ಟಾಕೀಸ್ ನಿಂದ ಹೊರಬಂದಿರುವ ಸಿನಿಮಾಗಳು ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿರುವುದೇ ಇದಕ್ಕೆ ಕಾರಣ. ಸದ್ಯ ತರುಣ್ ಶಿವಪ್ಪ ನಿರ್ಮಾಣದ ‘ಖಾಕಿ’ ಜನವರಿ 24ಕ್ಕೆ ರಿಲೀಸ್ ಗೆ ರೆಡಿಯಾಗಿದೆ.
ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಿತ್ವಿಕ್ ಸಂಗೀತ ನೀಡಿದ್ದಾರೆ. ಬಾಲಾ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ತಾನ್ಯ ಹೋಪ್ ನಟಿಸಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ನವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.