ChikkaballapurCrimeDistrictsKarnatakaLatest

ಕಡಲೆಕಾಯಿ ಪರಿಷೆಯಲ್ಲಿ ಕಳ್ಳಿಯರ ಕೈಚಳಕ

ಚಿಕ್ಕಬಳ್ಳಾಪುರ: ಸೂಲಾಲಪ್ಪನ ದಿನ್ನೆ ವಿರಾಂಜನೇಯ ದೇಗುಲದ ಕಡಲೆಕಾಯಿ ಪರಿಷೆಯ ಜನಜಂಗುಳಿಯನ್ನು ಬಂಡವಾಳ ಮಾಡಿಕೊಂಡ ಖತರ್ನಾಕ್ ಕಳ್ಳಿಯರು ಕೈ ಚಳಕ ತೋರಿ, ಮಾಂಗಲ್ಯ ಸರ, ಚಿನ್ನಾಭರಣ ಕಳವು ಮಾಡಿದ್ದಾರೆ.

ನಗರ ಹೊರವಲಯದ ಸೂಲಾಲಪ್ಪನ ದಿನ್ನೆ ಸಮೀಪದ ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿಯ ಶ್ರೀ ವಿರಾಂಜನೇಯ ದೇಗುಲದ ರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನೆರವೇರಿತು. ಅದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲನಂದನಾಥ ಸ್ವಾಮೀಜಿ ಭಕ್ತರ ಮೇಲೆ ಕಡಲೆಕಾಯಿ ಎರಚುವ ಮೂಲಕ ಪರಿಷೆಗೆ ಚಾಲನೆ ನೀಡಿದರು.

ಈ ಕಡಲೆಕಾಯಿ ಪರಿಷೆಯಲ್ಲಿ ಐವರು ಮಹಿಳೆಯರು ಚಿನ್ನಾಭರರಣ ಕಳೆದುಕೊಂಡಿದ್ದಾರೆ. ಕೊಳವನಹಳ್ಳಿ ಗ್ರಾಮದ ರತ್ನಮ್ಮ ಎಂಬವರ 65 ಗ್ರಾಂ, ಸೊಪ್ಪಹಳ್ಳಿ ಗ್ರಾಮದ ಸರಸ್ವತಮ್ಮ ಅವರ 75 ಗ್ರಾಂ, ಕಂದವಾರ ಬಾಗಿಲಿನ ಮುನಿರತ್ನಮ್ಮ ಎಂಬವರ 35 ಗ್ರಾಂಮ ಹಾಗೂ ಮಂಜುಳಮ್ಮ ಎಂಬವರ 45 ಗ್ರಾಂ ಚಿನ್ನದ ಸರಗಳನ್ನು ಕಳ್ಳಿಯರು ಕದ್ದು ಪರಾರಿಯಾಗಿದ್ದಾರೆ.

ಅಯ್ಯೋ ಆಂಜನೇಯ ನಿನ್ನ ಪೂಜೆಗೆ ಬಂದು ಹೀಗೆ ಆಗೋಯ್ತಲ್ಲ ಅಂತ ಚಿನ್ನಾಭರಣ ಕಳೆದುಕೊಂಡ ಮಹಿಳೆಯರು ಮನೆಯಲ್ಲಿ ಏನಪ್ಪಾ ಹೇಳೋದು ಅಂತ ಅಸಹಾಯಕರಾಗಿ ಕಣ್ಣೀರಿಟ್ಟರು. ಅದೃಷ್ಟವಶಾತ್ ಜಯಮ್ಮ ಎಂಬವರ ಸರವನ್ನು ಕಳ್ಳಿಯರು ಕತ್ತರಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಜಯಮ್ಮ ಸರ ನೋಡಿಕೊಂಡಿದ್ದಾರೆ. ಈ ವೇಳೆ ಸರ ಕೈಗೆ ಸಿಕ್ಕಿದ್ದು, ಗದ್ದಲದಿಂದ ಹೊರಬಂದಿದ್ದಾರೆ.

ನಂದಿಗಿರಿಧಾಮ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕಳ್ಳಿಯರ ಖತರ್ನಾಕ್ ಕೆಲಸ ಈಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button