ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನ (Ram Temple Theft Row) ಆರೋಪದ ಬಗ್ಗೆ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್ (Champat Rai) ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನನ್ನ ಸಾರ್ವಜನಿಕ ಜೀವನ ತೆರೆದ ಪುಸ್ತಕ ಎಂದು ಅವರು ಹೇಳಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿರುವ ಅವರು, ನಾನು ವೈಯಕ್ತಿಕವಾಗಿ ಅನ್ಯಾಯವಾದ ಆರೋಪಗಳನ್ನು ಎದುರಿಸಬೇಕಾಯಿತು. ಟ್ರಸ್ಟ್‌ನ ಇಚ್ಛೆಯಂತೆ ನಾನು ಇಷ್ಟು ದಿನ ಮೌನ ವಹಿಸಿದ್ದೆ. ಈಗ ಎಸ್‌ಐಟಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಆದಾಗ್ಯೂ, ಅಂತಿಮ ವರದಿಗಾಗಿ ಎಲ್ಲರೂ ಕಾಯಬೇಕು. ಇದನ್ನೂ ಓದಿ: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿ ನೇಮಕ – ಯಾರು ಈ ಕೃಷ್ಣಮೋಹನ್?
धीरज धर्म मित्र अरु नारी,
आपद काल परिखिअहिं चारी। pic.twitter.com/PHtGs95ass— Champat Rai (@ChampatRaiVHP) July 7, 2026
ಆ ಬಳಿಕ ಈಗ ಎದ್ದಿರುವ ಎಲ್ಲಾ ಅಪಾರ್ಥ, ತಪ್ಪು ಮಾಹಿತಿಗೆ ಉತ್ತರ ಕೊಡುತ್ತೇನೆ. ಸತ್ಯ ಎಂದಿದ್ದರೂ ಆಚೆ ಬರಲೇಬೇಕು. 1991ರಿಂದ ಅಯೋಧ್ಯೆಯಲ್ಲಿ ಸೇವೆ ಮಾಡುತ್ತಿದ್ದೇನೆ. 45 ವರ್ಷಗಳ ನನ್ನ ಸಾರ್ವಜನಿಕ ಜೀವನ ತೆರೆದ ಪುಸ್ತಕ ಎಂದು ಬರೆದುಕೊಂಡಿದ್ದಾರೆ.
ಎರಡನೇ ಹಂತದಲ್ಲಿ ತನಿಖೆ ಆರಂಭಿಸಿರುವ ಎಸ್‌ಐಟಿ, ಇತ್ತೀಚೆಗೆ ಟ್ರಸ್ಟ್ ಮಾಡಿರುವ 3 ಕಾರ್ಯಕ್ರಮಗಳ ಹಣಕಾಸು ವ್ಯವಹಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. 2024ರ ಮಂದಿರ ಶುದ್ಧೀಕರಣ, 2025ರಲ್ಲಿ ಮಹಾಕುಂಭ ಮೇಳಕ್ಕೆ ಸಂಬಂಧಿಸಿದ ವ್ಯವಸ್ಥೆಗಳು, 2025ರಲ್ಲಿಯೇ ನಡೆದ ಧ್ವಜಾರೋಹಣ ಕಾರ್ಯಕ್ರಮಕ್ಕೆ 124 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಖರ್ಚು ವೆಚ್ಚಗಳಲ್ಲಿ ಅಕ್ರಮದ ಶಂಕೆ ಇರುವ ಹಿನ್ನೆಲೆಯಲ್ಲಿ ಆಡಿಟ್ ವರದಿಗಳ ಮರು ಪರಿಶೀಲನೆಗೆ ಎಸ್‌ಐಟಿ ಮುಂದಾಗಿದೆ.
ಸಿಎಂ ಯೋಗಿಗೆ ವರದಿ ಸಲ್ಲಿಸಿರುವ ಎಸ್‌ಐಟಿಯು, 45 ದಿನಗಳಲ್ಲಿ 70 ಬಾರಿ ಹಣ ಕಳ್ಳತನದ ಸಾಕ್ಷಿಯನ್ನು ಉಲ್ಲೇಖಿಸಿದೆ. ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ, ಹಣ ಎಣಿಕೆ ಕೊಠಡಿ ಉಸ್ತುವಾರಿ ಸುಭಾಶ್ ಶ್ರೀವಾಸ್ತವ ಹಾಗೂ ಟಿನ್ನು ಯಾದವ್ ಹೆಸರು ಉಲ್ಲೇಖಿಸಿ ಪ್ರಮುಖ ಕಾರಣರು ಎಂದು ಉಲ್ಲೇಖಿಸಿದೆ. ಆದರೆ, ಟ್ರಸ್ಟ್ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಮಂದಿರದ ನಿರ್ಮಾಣ ಉಸ್ತುವಾರಿ ಗೋಪಾಲ್ ರಾವ್ ಹೆಸರು ಉಲ್ಲೇಖಿಸಿಲ್ಲ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ| ಚಂಪತ್ ರಾಯ್ ರಾಜೀನಾಮೆ ಅಂಗೀಕಾರ
