ನೆಲಮಂಗಲ: ಮೂವರ ಆತ್ಮಹತ್ಯೆ ಕೇಸ್‍ನಲ್ಲಿ ಪೊಲೀಸರು ಮೃತ ತಾಯಿ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.
ಬಿಎಂಟಿಸಿ ನೌಕರ ಪ್ರಸನ್ನ ಕುಮಾರ್ ಕೊರೊನಾಗೆ ಸಾವನ್ನಪ್ಪಿದ ಹಿನ್ನೆಲೆ ಖಿನ್ನತೆಗೆ ಒಳಗಾದ ಪತ್ನಿ ಇಬ್ಬರು ಮಕ್ಕಳ ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಬೆಂಗಳೂರು ಹೊರವಲಯ ತೋಟದಗುಡ್ಡದ ಹಳ್ಳಿಯ ಪ್ರಕೃತಿ ಬಡಾವಣೆಯಲ್ಲಿ ಈ ಘಟನೆ ಮೊನ್ನೆ ಪ್ರಕರಣ ಬೆಳಕಿಗೆ ಬಂದಿತ್ತು. ಇಬ್ಬರು ಮಕ್ಕಳು ಆತ್ಮಹತ್ಯೆಗೆ ತಾಯಿಯೇ ಕಾರಣ ಎಂದು ಮೃತ ತಾಯಿಯ ವಿರುದ್ಧ ತನಿಖೆ ನಡೆಸಿದ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್‍ನಲ್ಲೂ ಫೈನಲ್ ಆಗಿಲ್ಲ ಅಭ್ಯರ್ಥಿ ಹೆಸರು
Advertisement
Advertisement
ಪತಿ ಸಾವಿನ ನಂತರ ಜಿಗುಪ್ಸೆಗೆ ಒಳಗಾಗಿದ್ದ ಪತ್ನಿ ವಸಂತ, ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಹೆತ್ತ ತಾಯಿ ಎನ್ನಲಾಗಿದೆ. ಆಕೆಯ ಖಿನ್ನತೆಗೆ ಇಬ್ಬರು ಮಕ್ಕಳ ಕೊಲೆ ಮಾಡಿಸಿದ ಆರೋಪ ಕೇಳಿಬಂದಿದೆ. ಮೃತ ವಸಂತ ವಿರುದ್ಧ 302(ಕೊಲೆ) ಹಾಗೂ 306(ಆತ್ಮಹತ್ಯೆಗೆ ಕುಮ್ಮಕ್ಕು) ಕೇಸ್ ದಾಖಲಾಗಿದೆ. ಇದನ್ನೂ ಓದಿ: ಅರಸೀಕೆರೆಯಲ್ಲಿ ಆಕ್ಸಿಜನ್ ಘಟಕ ಉದ್ಘಾಟನೆ ವೇಳೆ ಜೆಡಿಎಸ್, ಬಿಜೆಪಿ ನಡುವೆ ವಾಕ್ಸಮರ
Advertisement
ವಸಂತ ಆತ್ಮಹತ್ಯೆಯಿಂದ ಯುಡಿಆರ್(ಅಸಹಜ ಸಾವು) ಅಡಿ ಪ್ರಕರಣ ದಾಖಲಾಗಿದ್ದು, ನಿನ್ನೆ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೂವರ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು. ನಂತರ ಪತಿಯ ಊರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.