ತೆಲುಗಿನ ಖ್ಯಾತ ಗಾಯಕಿ (Singer) ಮಂಗ್ಲಿ (Mangli) ಅವರು ಪ್ರಯಾಣಿಸುತ್ತಿದ್ದ ಕಾರಿಗೆ (Car) ಅಪಘಾತವಾಗಿರುವ (Accident) ಸುದ್ದಿ ನಿನ್ನೆ ಭಾರೀ ಸದ್ದು ಮಾಡಿತ್ತು. ಆಧ್ಯಾತ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಮಂಗ್ಲಿ ಸೇರಿದಂತೆ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿತ್ತು.
ಹೈದರಾಬಾದ್ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ, ಹಿಂಬದಿಯಿಂದ ಬಂದಿದ್ದ ಲಾರಿ ಡಿಕ್ಕಿ ಹೊಡೆದಿದೆ. ಕಾರಿನ ಹಿಬ್ಬಂದಿ ನುಜ್ಜುಗುಜ್ಜಾಗಿದೆ. ಶಂಶಾಬಾದ್ ನಿಂದ ಮಂಗ್ಲಿ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿತ್ತು.
ಈ ಕುರಿತಂತೆ ಮಂಗ್ಲಿ ಅವರೇ ಸ್ಪಷ್ಟನೆ (Clarification) ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಘಟನೆ ನಡೆದಿರೋದು ನಿನ್ನೆಯಲ್ಲ. ಎರಡು ದಿನದ ಹಿಂದೆಯೇ ನಡೆದಿರುವಂತಹ ಘಟನೆ. ಆದರೆ, ಸುದ್ದಿಯಾದಷ್ಟು ಯಾರಿಗೂ ಏನೂ ಆಗಿಲ್ಲ. ಆತಂಕ ಪಡುವಂಥದ್ದು ಏನಿಲ್ಲ. ಎಲ್ಲರೂ ಚೆನ್ನಾಗಿಯೇ ಇದ್ದೇವೆ. ಸುಳ್ಳು ಸುದ್ದಿ ಹರಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಮಂಗ್ಲಿ ಮೂಲತಃ ತೆಲುಗು ಗಾಯಕಿಯಾಗಿದ್ದರೂ, ಅತೀ ಹೆಚ್ಚು ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ ಎನ್ನುವುದು ವಿಶೇಷ. ಅದರಲ್ಲೂ ಅವರು ರಾಬರ್ಟ್ ಚಿತ್ರಕ್ಕಾಗಿ ಹಾಡಿದ ಹಾಡು ಸಾಕಷ್ಟು ಫೇಮಸ್ ಆಗಿತ್ತು.