ನವದೆಹಲಿ: ಬಿಡಬ್ಲ್ಯುಎಫ್ (BWF) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಡಬಲ್ಸ್ ತಾರಾ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ(Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ(Chirag Shetty) ಅವರ 3ನೇ ಪದಕದ ಕನಸು ಭಗ್ನಗೊಂಡಿದೆ.
ಇಂದು ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿಯು ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ನೇರ ಗೇಮ್‌ಗಳಿಂದ ಸೋಲನುಭವಿಸಿದೆ.
It wasn’t meant to be 💔
A visibly disappointed Satwik – Chirag thanked the home crowd for their support and applauded Liang-Wang on their win!
Wishing SatChi to comeback stronger next time 🤗#bwfworldchampionships #newdelhi2026 pic.twitter.com/ipr6Z59HZ9
— BAI Media (@BAI_Media) August 21, 2026
ವಿಶ್ವದ 5ನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಜೋಡಿಯು ವಿಶ್ವದ 3ನೇ ಶ್ರೇಯಾಂಕದ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರಾದ ಚೀನಾ ಜೋಡಿಯ ಎದುರು ನಿರೀಕ್ಷಿತ ಲಯ ಕಂಡುಕೊಳ್ಳಲು ವಿಫಲವಾಯಿತು. ಕೇವಲ 36 ನಿಮಿಷಗಳಲ್ಲಿ 18-21, 9-21 ಅಂತರದಲ್ಲಿ ಶರಣಾಯಿತು. ಈ ಹಿಂದೆ 2022 ಮತ್ತು 2025ರ ಆವೃತ್ತಿಗಳಲ್ಲಿ ಕಂಚಿನ ಪದಕ ಗೆದ್ದಿದ್ದ ಜೋಡಿಯು ಈ ಬಾರಿ ಕ್ವಾರ್ಟರ್‌ಫೈನಲ್‌ನಲ್ಲೇ ಹೊರಬಿದ್ದಿದೆ. ಇದನ್ನೂ ಓದಿ: ಭಾರತಕ್ಕೆ ಮೊದಲ ಪದಕ ಖಚಿತ – ಸೆಮಿ ಪ್ರವೇಶಿಸಿದ ತ್ರೀಸಾ, ಗಾಯತ್ರಿ

