– 15 ವರ್ಷದ ಬಳಿಕ ಡಬಲ್ಸ್‌ನಲ್ಲಿ ಸಾಧನೆ
ನವದೆಹಲಿ: ಭರವಸೆಯ ಬ್ಯಾಡ್ಮಿಂಟನ್ ತಾರೆಯರಾದ ತ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ 2026ರಲ್ಲಿ(BWF World Championships) ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದೆ.
ಮಹಿಳಾ ಡಬಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕದ ಚೀನಾದ ಜಾಂಗ್ ಶುಕ್ಸಿಯಾನ್ ಮತ್ತು ಜಿಯಾ ಯಿಫಾನ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸುವ ಮೂಲಕ ಭಾರತೀಯ ಜೋಡಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಮೊದಲ ಗೇಮ್ ಸೋತ ನಂತರ ಅಮೋಘ ಕಮ್‌ಬ್ಯಾಕ್ ಮಾಡಿದ ತ್ರೀಸಾ-ಗಾಯತ್ರಿ(Treesa Jolly, Gayatri Gopichand) ಜೋಡಿಯು 16-21, 21-15, 21-13 ಸೆಟ್‌ಗಳಿಂದ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತು.
ಪಂದ್ಯದ ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಭಾರತೀಯ ಜೋಡಿ, ನಂತರ ಹೋರಾಟ ನಡೆಸಿ ಅಂಕವನ್ನು 14-16ಕ್ಕೆ ತಂದಿತು. ಆದಾಗ್ಯೂ, ನಿರ್ಣಾಯಕ ಹಂತದಲ್ಲಿ ನಿಯಂತ್ರಣ ಸಾಧಿಸಿದ ಚೀನಾ(China) ಜೋಡಿಯು ಮೊದಲ ಗೇಮ್ ಅನ್ನು 21-16 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಇದನ್ನೂ ಓದಿ: ಸಿಂಧು, ಆಯುಷ್ ಶೆಟ್ಟಿಗೆ ಸೋಲು – ಟೂರ್ನಿಯಿಂದ ಔಟ್
No.4 seeds Jia/Zhang 🇨🇳 oppose Jolly/Pullela 🇮🇳 in a match to remember.#BWFWorldChampionships #NewDelhi2026 pic.twitter.com/Tze2wufiNQ
— BWF (@bwfmedia) August 21, 2026
ತೀವ್ರ ಪೈಪೋಟಿ ಕಂಡ ಎರಡನೇ ಗೇಮ್‌ನಲ್ಲಿ ಸ್ಮ್ಯಾಶ್‌ಗಳ ಮೂಲಕ 11-10ರ ಮುನ್ನಡೆ ಪಡೆದ ಭಾರತೀಯರು, ಒತ್ತಡದ ನಡುವೆಯೂ ಆಟ ಪ್ರದರ್ಶಿಸಿ 21-15 ಅಂತರದಲ್ಲಿ ಗೇಮ್ ಗೆದ್ದು ಸಮಬಲ ಸಾಧಿಸಿದರು.
ಆರಂಭಿಕ ಹಿನ್ನಡೆಯ ನಂತರ ಸತತ ಅಂಕಗಳನ್ನು ಕಲೆಹಾಕಿದ ತ್ರೀಸಾ-ಗಾಯತ್ರಿ 4-4ರಲ್ಲಿ ಸಮಬಲ ಸಾಧಿಸಿ, ಬಳಿಕ 11-5 ಹಾಗೂ 17-9ರ ಬೃಹತ್ ಮುನ್ನಡೆ ಕಾಯ್ದುಕೊಂಡರು. ಕೊನೆಯ ಹಂತದಲ್ಲಿ ಚೀನಾ ಆಟಗಾರರಿಗೆ ಯಾವುದೇ ಅವಕಾಶ ನೀಡದೆ 21-13 ಅಂತರದಲ್ಲಿ ಗೇಮ್ ಜೊತೆಗೆ ಪಂದ್ಯವನ್ನು ವಶಪಡಿಸಿಕೊಂಡರು.
Moments like this mean everything!
Follow live action: https://t.co/TjoFnU4PnB#BWFWorldChampionships #NewDelhi2026 pic.twitter.com/aOJxpmgroa
— BWF (@bwfmedia) August 21, 2026
ಐತಿಹಾಸಿಕ ಸಾಧನೆ:
ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ ಭಾರತದ 2ನೇ ಜೋಡಿ ಎಂಬ ಹೆಗ್ಗಳಿಕೆಗೆ ತ್ರೀಸಾ ಜೋಲಿ ಮತ್ತು ಗಾಯತ್ರಿ ಪುಲ್ಲೇಲ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2011ರಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿ ಕಂಚಿನ ಪದಕ ಗೆದ್ದುಕೊಂಡಿತ್ತು. ಈಗ 15 ವರ್ಷಗಳ ಬಳಿಕ ಭಾರತೀಯ ಮಹಿಳಾ ಜೋಡಿಯೊಂದು ಈ ವಿಭಾಗದಲ್ಲಿ ಪದಕವನ್ನು ಖಚಿತಪಡಿಸಿದೆ.
