ಹಾವೇರಿ: ಬೆಂಗಳೂರಿನಿಂದ ಗದಗ ನಗರಕ್ಕೆ ಹೋಗುತ್ತಿದ್ದ ಪಲ್ಲಕ್ಕಿ ಬಸ್‌ಗೆ (Pallakki Bus) ಆಕಸ್ಮಿಕ ಬೆಂಕಿ ತಗುಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ಬಳಿ ರಾಜ್ಯಹೆದ್ದಾರಿಯಲ್ಲಿ ನಡೆದಿದೆ.
ಕ್ಷಣಾರ್ಧದಲ್ಲಿ ಈ ದುರ್ಘಟನೆ ನಡೆದಿದ್ದು ದೊಡ್ಡ ದುರಂತ ತಪ್ಪಿದ್ದು, ಚಾಲಕನ (Bus Driver) ಸಮಪ್ರಜ್ಜೆಯಿಂದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿ ಕೇಸರಿ ಸುನಾಮಿ – ಮಮತಾ ಆಡಳಿತಕ್ಕೆ ಅಂತ್ಯ ಹಾಡಲು ಆರ್‌ಎಸ್‌ಎಸ್ ‘ಸೈಲೆಂಟ್ ಆಪರೇಷನ್’ ಯಶಸ್ವಿ!

ಬೆಂಗಳೂರಿನಿಂದ ಗದಗ ಹೊರಟಿದ್ದ (KA-57-F6680) ಸಂಖ್ಯೆಯ ಪಲ್ಲಕ್ಕಿ ಬಸ್‌ನಲ್ಲಿ ಸುಮಾರು 17 ಹೆಚ್ಚು ಪ್ರಯಾಣಿಕರು ಗದಗ ಕಡೆಗೆ ಪ್ರಯಾಣಿಸುತ್ತಿದ್ದರು. ಬ್ರೇಕ್ ಲೈನ್ ದೋಷದಿಂದ ಬೆಂಕಿ ಅವಘಡ ಸಂಭವಿಸಿದ್ದು ಎನ್ನಲಾಗಿದೆ. ಇದನ್ನೂ ಓದಿ: ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಬಸ್ ಚಾಲಕ ಪಕ್ಕೀರಪ್ಪ ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












